ಪೊಲೀಸರರೆಂದು ದರೋಡೆಗೈದವರ ಬಂಧನ

Arrest Kaidhi
Published on

ಕಾಸರಗೋಡು: ಕಾಸರಗೋಡು ನಿವಾಸಿ ರಾಬಿನ್ ಥಾಮಸ್ ಎಂಬುವರ ಮೇಲೆ ಹಲ್ಲೆ ನಡೆಸಿ, 500 ರೂ. ಕಸಿದು ಅವರು ಸಂಚರಿಸುತ್ತಿದ್ದ ಬೈಕ್‌ಗೆ ಹಾನಿಯೆಸಗಿದ ಏಳು ಮಂದಿ ಆರೋಪಿಗಳನ್ನು ಕಣ್ಣೂರು ಧರ್ಮಡಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಂ.ತಸ್ಮೀರ್, ಕೆ.ಕೆ.ಅಪ್‌ನಾಸ್, ಟಿ.ಕೆ.ಶಾನಿರ್, ಕೆ.ಕೆ.ಮಹಮ್ಮದ್ ಅಫ್ಸರ್, ಕೆ.ಶಬೀರ್, ಎ.ಮಹಮ್ಮದ್ ಅಸ್ಗರ್ ಹಾಗೂ ಅಹಮ್ಮದ್ ನಿಸಾರ್ ಬಂಧಿತರು. ಅ.12ರಂದು ತನ್ನ ಸ್ನೇಹಿತನ ಮನೆಗೆ ಬೈಕಲ್ಲಿ ಸಂಚರಿಸುತ್ತಿದ್ದ ಸಂದರ್ಭ ಪೊಲೀಸರೆಂದು ಆಗಮಿಸಿದ ತಂಡ ಹಾದಿ ಮಧ್ಯೆ ತಡೆದು, ಬೈಕಿಗೆ ಹಾನಿಗೈದು, 500 ರೂ. ನಗದು ದೋಚಿರುವುದಾಗಿ ರಾಬಿನ್ ಥಾಮಸ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net