ಟೈರ್ ಸ್ಪೋಟಗೊಂಡು ಹಳ್ಳಕ್ಕೆ ಬಿದ್ದ ಕೆಎಸ್ ಆರ್ ಟಿಸಿ ಬಸ್

IMG-20231112-WA0238.jpg
Published on

ಮಾಗಡಿ : ಮುಂಭಾಗದ ಚಕ್ರ ಸಿಡಿದು ಕೆಎಸ್ ಆರ್ ಟಿಸಿ ಬಸ್ ಹಳ್ಳಕೆ ಬಿದ್ದ ಪರಿಣಾಮ 10 ಕ್ಕೂ
ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯಗೊಂಡೊರುವ ಘಟನೆ ತಾಲೂಕಿನ ಚಿಕ್ಕತೊರೆಪಾಳ್ಯದಲ್ಲಿ ನಡೆದಿದೆ.

ಹುಲಿಯೂರುದುರ್ಗದಿಂದ ಬೆಂಗಳೂರಿಗೆ
ತೆರಳುತ್ತಿದ್ದ ವೇಳೆ ಮುಂಭಾಗದ ಚಕ್ರ ಸ್ಪೋಟಗೊಂಡಿದ್ದು ಸೇತುವೆ ಬಳಿಯ ಹಳ್ಳಕ್ಕೆ ಉರುಳಿದೆ.

ಈ ವೇಳೆ ಕೆಎಸ್‍ಆರ್ ಟಿಸಿ ಬಸ್ ನಲ್ಲಿದ್ದ
10 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ,
ಹಾಗೂ ಡ್ರೈವರ್ ಸೈದ್ ಉಸಾಬ್ ನದಾಪ್ ತಲೆಗೆ
ಗಾಯವಾಗಿದ್ದು ಕೂಡಲೇ ಗಾಯಾಳುಗಳನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದ್ದು, ಒಂದುವೇಳೆ ಬಸ್ ಬಲ ಭಾಗದ ಹಳ್ಳಕ್ಕೆ ಬಿದಿದ್ದರೆ ದೊಡ್ಡ ಅನಾಹುತ
ಸಂಭವಿಸುತ್ತಿತ್ತು. ಘಟನೆ ನಂತರ ಉಳಿದ
ಪ್ರಯಾಣಿಕರನ್ನು ಬೇರೆ ಬಸ್‍ನಲ್ಲಿ ಬೆಂಗಳೂರಿಗೆ
ಕಳುಹಿಸಿಕೊಡಲಾಗಿದೆ.

ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ
ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಚಿಕ್ಕತೋರೆ ಪಾಳ್ಯ ಬಳಿ ಮಾಗಡಿ- ಬೆಂಗಳೂರು
ಕೆಶಿಫ್ ರಸ್ತೆ ಕಾಮಗಾರಿಯ ಬೃಹತ್ ಬ್ರಿಜ್ ಕಾಮಗಾರಿ
ನಡೆಯುತ್ತಿರುವುದರಿಂದ ಎದುರು ಬರುವ
ವಾಹನಗಳು ಸಂಚರಿಸಲು ಕಿರಿದಾದ ರಸ್ತೆ
ಇರುವುದರಿಂದ ಒಂದಲ್ಲಾ ಒಂದು ಅನಾಹುತಗಳು
ನಿರಂತರವಾಗಿ ನಡೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net