ಕರ್ತವ್ಯನಿರತ ಕೆಎಸ್ಆರ್​ಟಿಸಿ ಬಸ್​ ಕಂಡಕ್ಟರ್​ಗೆ ಹೃದಯಾಘಾತ, ಸಾವು

death
Published on

​ನೆಲಮಂಗಲ: ಕರ್ತವ್ಯನಿರತ ಕೆಎಸ್ಆರ್​ಡಿಸಿ ಬಸ್ ನಿರ್ವಾಹಕರೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ನಗರದಲ್ಲಿ ಸಂಭವಿಸಿದೆ.

ಹೊಳೆನರಸೀಪುರ ಮೂಲದ ಟಿ.ಎನ್.ಸೋಮೇಶ್(32) ಮೃತ. ನೆಲಮಂಗಲ ಡಿಪೋ ಬಸ್​ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸೋಮೇಶ್​, ಇಂದು ನೆಲಮಂಗಲದ ಬಳಗೆರೆಯಿಂದ ಕೆ.ಆರ್.ಮಾರ್ಕೆಟ್​ಗೆ ಹೊರಟ ಬಸ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಸ್​ನಲ್ಲೇ ಎದೆನೋವು ಕಾಣಿಸಿಕೊಂಡಿತ್ತು. ಇದನ್ನೂ ಓದಿರಿ ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

ಕೂಡಲೇ ಅವರನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತ್ತಾದರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು.

ಸಾವು ಯಾವಾಗ? ಯಾವ ರೂಪದಲ್ಲಿ? ಬರುತ್ತೆ ಎಂದು ಊಹಿಸಲೂ ಸಾಧ್ಯವಿಲ್ಲ. ದುಡಿಮೆಗಾಗಿ ಮನೆಬಿಟ್ಟು ಬೇರೆ ಊರಿಗೆ ಬಂದ ಮಗ ಹೆಣವಾಗಿ ಬರುತ್ತಿರುವ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net