ಶಿಕ್ಷಕ ವಿಶ್ವನಾಥ ಕೆ.ದಂಪತಿಗೆ ಗೌರವ

Bel_Tribute
Published on

ಬೆಳ್ತಂಗಡಿ: ಚಿತ್ರಕಲೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಜ್ಯಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ವಿಜೇತರಾದ ಗುರುವಾಯನಕೆರೆಯ ನಮ್ಮೂರ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ವಿಶ್ವನಾಥ ಕೆ., ವಿಟ್ಲ (ವಿ.ಕೆ.ವಿಟ್ಲ) ದಂಪತಿಯನ್ನು ಅಂತಾರಾಷ್ಟ್ರೀಯ ಸೀನಿಯರ್ ಛೇಂಬರ್ ದಿನಾಚರಣೆಯ ಸಂಭ್ರಮಾಚಣೆಯ ಅಂಗವಾಗಿ ಉಜಿರೆಯ ಅವರ ಮನೆಯಲ್ಲಿ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ವತಿಯಿಂದ ಗೌರವಿಸಲಾಯಿತು.

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಅಧ್ಯಕ್ಷ ವಾಲ್ಟರ್ ಸಿಕ್ವೇರಾ, ಕಾರ್ಯದರ್ಶಿ ಜಾನ್ ಅರ್ವಿನ್ ಡಿಸೋಜ, ಸ್ಥಾಪಕಾಧ್ಯಕ್ಷ ಡಾಟ ಪ್ರಮೋದ್ ಆರ್.ನಾಯಕ್, ಪೂರ್ವಾಧ್ಯಕ್ಷ ಲ್ಯಾನ್ಸಿ ಪಿರೇರಾ, ವಿಶ್ವನಾಥ ಶೆಟ್ಟಿ, ಸದಸ್ಯರಾದ ವಿಲ್ಸನ್ ಗೊನ್ಸಾಲ್ವಿಸ್, ದಯಾನಂದ ಕೆ., ಭರತ್ ಕುಮಾರ್, ಕಿರಣ್ ಕುಮಾರ್ ಹಾಗೂ ರಾಧಾಕೃಷ್ಣ ಕೆ.ಮೊದಲಾದವರು ಉಪಸ್ಥಿತರಿದ್ದರು.

ಲ್ಯಾನ್ಸಿ ಪಿರೇರಾ ನಿರೂಪಿಸಿ, ಸ್ವಾಗತಿಸಿದರು, ಡಾ.ಪ್ರಮೋದ್ ಆರ್.ನಾಯಕ್ ’ಅಂತಾರಾಷ್ಟ್ರೀಯ ಸೀನಿಯರ್ ಛೇಂಬರ್ ದಿನಾಚರಣೆಯ ವಿಶೇಷತೆಯನ್ನು ತಿಳಿಸಿದರು. ಕಾರ್ಯದರ್ಶಿ ಜಾನ್ ಅರ್ವಿನ್ ಡಿಸೋಜ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net