

ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯಿತಿಯ ಕುಟುಂಬ ಆರೋಗ್ಯ ಕೇಂದ್ರ 'ಟಿ.ಬಿ.ಮುಕ್ತ ಆರೋಗ್ಯ 2023-2025' ಪ್ರಶಸ್ತಿಗೆ ಭಾಜನವಾಗಿದೆ. ಆರೋಗ್ಯ ಸಚಿವಾಲಯ ಈ ಪ್ರಶಸ್ತಿ ಘೋಷಿಸಿದೆ.
2023ರಲ್ಲಿ ಕೇರಳದ 60 ಸ್ಥಳೀಯಾಡಳಿತಗಳು(59 ಪಂಚಾಯಿತಿಗಳು ಮತ್ತು 1 ನಗರಸಭೆ) ಬಿ.ಎಲ್.ಎಸ್.ಡಿ.ಗಳನ್ನು ಟಿ.ಬಿ.ಮುಕ್ತವಾಗಿ ಘೋಷಿಸಲಾಗಿತ್ತು. ಆಗ ಬೆಳ್ಳೂರಿಗೂ ಮಾನ್ಯತೆ ದೊರಕಿದ್ದು ಈ ಉದ್ದೇಶಕ್ಕಾಗಿ, 2023ರ ಆ.1ರಂದು ಪ್ರಾರಂಭವಾದ ಎರಡನೇ ಹಂತದ ಯೋಜನೆ ಟಿ.ಬಿ.ಮುಕ್ತ ಬೆಳ್ಳೂರು ಆಗಲು ಗಮನಾರ್ಹವಾಯಿತು.
ಕುಳದಪಾರೆಯನ್ನು ಪೈಲಟ್ ವಾರ್ಡ್ ಎಂದು ಘೋಷಿಸಿ, 13 ವಾರ್ಡ್‌ಗಳಿಂದ 1000ಕ್ಕೂ ಹೆಚ್ಚು ಮಾದರಿಗಳನ್ನು ವಿವಿಧ ಡಿಎಂಸಿಗಳಿಗೆ ಕಳುಹಿಸಲಾಗಿತ್ತು. ಮೊದಲ ಹಾಗೂ ಎರಡನೇ ಹಂತದ ಈ ಯಶಸ್ಸಿಗೆ ಕಾರಣಕರ್ತರಾದ ಆರೋಗ್ಯ ಸಿಬ್ಬಂದಿಗಳು, ಜನಪ್ರತಿನಿಧಿಗಳು, ನಾಗರಿಕರಿಗೆ ಗ್ರಾಪಂ ಅಧ್ಯಕ್ಷ ಎಂ.ಶ್ರೀಧರ ಅಭಿನಂದನೆ ಸಲ್ಲಿಸಿದ್ದಾರೆ.