ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಿ: ತಹಸೀಲ್ದಾರ್ ಎಚ್. ವಿಶ್ವನಾಥಗೆ ಮನವಿ

manavi
ಸಿರಗುಪ್ಪ ತಾಲೂಕು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಎಚ್. ವಿಶ್ವನಾಥಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ವಿಷ್ಣುಕಾಂತ, ಉಪಾಧ್ಯಕ್ಷ ಮನೋಜ್. ಪದಾಧಿಕಾರಿಗಳಾದ ಮಂಜುನಾಥ, ಗಣಪತಿ ಸಾ, ಸುನೀಲ್ ಕಟ್ವಾ, ಚಂದುಲಾಲ್ ಇದ್ದರು.
Published on

ಸಿರಗುಪ್ಪ: ತಾಲೂಕು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಂಘದ ಪದಾಧಿಕಾರಿಗಳು ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಎಚ್. ವಿಶ್ವನಾಥಗೆ ಶುಕ್ರವಾರ ಮನವಿ ಸಲ್ಲಿಸಿದರು.


ತಾಲೂಕು ಅಧ್ಯಕ್ಷ ವಿಷ್ಣುಕಾಂತ ಮಾತನಾಡಿ, ರಾಜ್ಯಾದ್ಯಂತ ನಮ್ಮ ಸಮಾಜದ ಜನಸಂಖ್ಯೆಯಲ್ಲಿ ಶೇ. 85% ರಷ್ಟು ಜನ ಕಡು ಬಡವರಾಗಿದ್ದಾರೆ. ಸೋಡಾ, ಕೋಲ್ಡ್‌ರಿಂಗ್ಸ್, ಹೋಟೆಲ್, ವಾಚ್ ರಿಪೇರಿ, ಬೀದಿ ಬದಿ ವ್ಯಾಪಾರ ಮಾಡುವ ಜನರಾಗಿದ್ದು, ಬೆರಳೆಣಿಕೆ ಜನ ಉತ್ತಮ ಸ್ಥಿತಿಯಲ್ಲಿದ್ದಾರೆ.

ಆದ್ದರಿಂದ ಸಮಾಜದ ಸರ್ವತೋಮುಖ ಬೆಳವಣಿಗೆಗಾಗಿ ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಉಪಾಧ್ಯಕ್ಷ ಮನೋಜ್. ಪದಾಧಿಕಾರಿಗಳಾದ ಮಂಜುನಾಥ, ಗಣಪತಿ ಸಾ, ಸುನೀಲ್ ಕಟ್ವಾ, ಚಂದುಲಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net