

ಕೆ.ಆರ್.ನಗರ: ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಬಸವೇಶ್ವರ ಬಡಾವಣೆಯ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಸ್.ಮಹೇಶ್ ಅಧಿಕಾರ ಸ್ವೀಕರಿಸಿದರು.
ಪಟ್ಟಣದ 7ನೇ ರಸ್ತೆಯಲ್ಲಿರುವ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರ್ದೇಶಕರಾಗಿ ಸೈಯದ್ ಜಾಬೀರ್, ಸರಿತಾ ಜವರಪ್ಪ ಮತ್ತು ಕೆ.ಎನ್.ಪ್ರಸನ್ನಕುಮಾರ್ ಅಧ್ಯಕ್ಷರೊಂದಿಗೆ ಅಧಿಕಾರ ಸ್ವೀಕಾರ ಮಾಡಿದರು.
ನೂತನ ಅಧ್ಯಕ್ಷ ಕೆ.ಎಸ್.ಮಹೇಶ್ ಮಾತನಾಡಿ, ಪಕ್ಷದ ವರಿಷ್ಠರು ನನಗೆ ನೀಡಿರುವ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿಭಾಯಿಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಕೆಲಸಗಳನ್ನು ಸರ್ಕಾರದ ನಿಯಮಾನುಸಾರ ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ನಡೆಸಲಾಗುವುದು ಎಂದು ಹೇಳಿದರು.
ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮಾಜಿ ನಿರ್ದೇಶಕ ಹೆಬ್ಬಾಳು ವೇಣುಗೋಪಾಲ್, ಪುರಸಭಾ ಸದಸ್ಯ ಕೆ.ಜಿ.ಸುಬ್ರಮಣ್ಯ, ನಟರಾಜ್, ಶಿವುನಾಯಕ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಯನಾ ನಾಯಕ್, ಮಾಜಿ ಅಧ್ಯಕ್ಷ ವೈ.ಎಸ್.ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಲತಾ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರಾಣಿ, ಸುನೀತಾ ರಮೇಶ್, ಎಂ.ಎ.ನಾಗೇಂದ್ರ, ರವಿಪೂಜಾರಿ, ಕೆಂಚಿಮಂಜು ಇತರರು ಇದ್ದರು.