ಸಾರ್ಥಕ ಬದುಕಿಗೆ ಸಾಹಿತ್ಯ ಪೂರಕ : ಡಾ.ಕಮಲಾಕ್ಷ ಕೆ. ಬಣ್ಣನೆ

New Project (4)
Published on

ಸುಳ್ಯ: ಲೇಖಕ ಎಂ.ಪದ್ಮನಾಭನ್ ನಾಯರ್ ಮಧುವನ ಬರೆದ ‘ಅಬದ್ಧ ಬದುಕಿನ ಆತ್ಮಕತೆ’ ಕೃತಿ ಬಿಡುಗಡೆ ಸುಳ್ಯದಲ್ಲಿ ನಡೆಯಿತು. ಸಂಧ್ಯಾರಶ್ಮಿ ಸಾಹಿತ್ಯ ಸಂಘ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕಸಾಪ ಸುಳ್ಯ ತಾಲೂಕು ಹೋಬಳಿ ಘಟಕಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ನಿವೃತ್ತ ಕನ್ನಡ ಉಪನ್ಯಾಸಕ ಡಾ.ಕಮಲಾಕ್ಷ ಕೆ. ಕೃತಿ ಬಿಡುಗಡೆ ಮಾಡಿ, ಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ಬದುಕಿನ

ಸಾರ್ಥಕ್ಯ. ಇದಕ್ಕೆ ಸಾಹಿತ್ಯ, ಸಂಗೀತಗಳು ಪೂರಕ. ಪದ್ಮನಾಭನ್ ನಾಯರ್ ಸಾಹಿತ್ಯ ಲೋಕದಲ್ಲಿ ತನ್ನ ಹೆಸರು ದಾಖಲಿಸುವ ರೀತಿಯಲ್ಲಿ ಕೃತಿ ಹೊರತಂದಿದ್ದಾರೆ ಎಂದರು.

ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ಕೃತಿ ಪರಿಚಯ ಮಾಡಿದರು. ಪ್ರಸ್ತಾವನೆಗೈದ ಶಿಕ್ಷಕ ಡಾ.ಸುಂದರ ಕೇನಾಜೆ, ಬರಹಗಾರನಿಗೆ ಭಾಷೆ, ವಯಸ್ಸಿನ ಮಿತಿ ಇಲ್ಲ. ಆತನ ಅನುಭವ ಇಂತಹ ಕೃತಿಗಳ ಮೂಲಕ ಅಭಿವ್ಯಕ್ತಿಗೊಳ್ಳಬೇಕು ಎಂದು ಹೇಳಿದರು.

ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಲೀಲಾ ದಾಮೋದರ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿವೃತ್ತ ಸಿಇಒ ಎಂ.ವಿಶ್ವನಾಥನ್ ನಾಯರ್ ಕೃತಿಕಾರರನ್ನು ಪರಿಚಯಿಸಿದರು. ಸುಳ್ಯ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಡಾ.ಎಸ್.ರಂಗಯ್ಯ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ಅಬ್ದುಲ್ಲ ಅರಂತೋಡು ಕಾರ್ಯಕ್ರಮ ನಿರೂಪಿಸಿದರು. ಕೇಶವ ಸಿ.ಎ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net