ಕೆಆರ್‌ಎಸ್ ಅಣೆಕಟ್ಟೆ ನಾಲ್ವಡಿ ದೂರದೃಷ್ಟಿಯ ಫಲ

04-06-25--krs1
ಕೃಷ್ಣರಾಜಸಾಗರ ಅಣೆಕಟ್ಟೆಯ ಮುಂಭಾಗದಲ್ಲಿ ಕಾವೇರಿ ನೀರಾವರಿ ನಿಗಮದ ಮತ್ತು ತಾಲೂಕು ಆಡಳಿತದ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಲಾಯಿತು.
Published on

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆಯ ಮುಂಭಾಗದಲ್ಲಿ ಬುಧವಾರ ಕಾವೇರಿ ನೀರಾವರಿ ನಿಗಮ ಮತ್ತು ತಾಲೂಕು ಆಡಳಿತ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ ಮಾಡಲಾಯಿತು.

ಅಣೆಕಟ್ಟೆಯ ದಕ್ಷಿಣ ಬೃಂದಾವನದ ಮುಖ್ಯದ್ವಾರದ ಮುಂಭಾಗದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ಪುಷ್ಪಾರ್ಚನೆ ಮಾಡಿದರು.

ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣಕರ್ತರು. ನಮ್ಮ ಈ ಅಣೆಕಟ್ಟೆ ನಿರ್ಮಾಣದಿಂದ ಇಂದು ನಾವು ಸಂತೋಷದಿಂದ ಇದ್ದೇವೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದ ನಾಲ್ವಡಿ ಅವರು, ಜಾತಿ ಪದ್ಧತಿ, ಬಾಲ್ಯವಿವಾಹ ನಿರ್ಮೂಲನೆಗೆ ಶ್ರಮಿಸಿದ್ದರು. ಅನೇಕ ಕಾರ್ಖಾನೆಗಳು, ವಿದ್ಯುತ್ ಉತ್ಪಾದನೆ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು ಎಂದು ಶಾಸಕರು ಸ್ಮರಿಸಿದರು. ಮಂಡ್ಯ ಜಿಲ್ಲೆಯ ಜೀವನದಿ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಾಣ ಅವರ ದೂರ ದೃಷ್ಟಿಯ ಫಲ ಎಂದು ಬಣ್ಣಿಸಿದರು.

ಕಾ.ನೀ.ನಿಗಮ ಕಾರ್ಯಪಾಲಕ ಇಂಜಿನಿಯರ್ ಜಯಂತ್, ತಹಸೀಲ್ದಾರ್ ಪರುಶರಾಮ್ ಸತ್ತಿಗೇರಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ವೇಣು, ಕೆ.ಆರ್.ಸಾಗರ ಗ್ರಾ.ಪಂ ಅಧ್ಯಕ್ಷೆ ಜಯಂತಿ ಕಾಳಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫಾರೂಕ್ ಅಭು, ಕಿಶೋರ್ ಕುಮಾರ್, ಜಯರಾಮ್, ರಶ್ಮಿ, ಲೋಹಿತ್, ಆರ್‌ಡಿಪಿಆರ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮಕೃಷ್ಣೇಗೌಡ, ಲೆಕ್ಕ ಅಧೀಕ್ಷಕ ಕೆ.ಆರ್.ಶ್ರೀನಿವಾಸ್, ಕೆ.ಆರ್.ಸಾಗರ ಗ್ರಾ.ಪಂ ಸದಸ್ಯರಾದ ಜಗದೀಪ್ ಸಿಂಗ್, ದೇವರಾಜು, ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಕಾ.ನೀ.ನಿಗಮದ ಅಭಿಯಂತರರಾದ ಲೋಹಿತ್ ಕುಮಾರ್, ಪುನೀತ್, ಕುಮಾರಸ್ವಾಮಿ, ಅಭಿಲಾಷ್, ಶಿವಕುಮಾರ್, ಅಕಿಬ್ ಜಾವಿದ್, ಸಹನಾ, ರಾಜಸ್ವ ನಿರೀಕ್ಷಕ ರೇವಣ್ಣ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net