ಡಾ.ಮೋಹನ ಆಳ್ವರಿಗೆ ಕೃಷ್ಣೋತ್ಸವ ಪ್ರಶಸ್ತಿ ಪ್ರದಾನ

New Project (8)
Published on

ಮೂಡುಬಿದಿರೆ: ಇಲ್ಲಿನ ಶ್ರೀ ಗೋಪಾಲಕೃಷ್ಣ ದೇವಳದ 109ನೇ ವರ್ಷದ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ ಆಶ್ರಯದಲ್ಲಿ ಶನಿವಾರ ಬೆದ್ರದ ಕೃಷ್ಣೋತ್ಸವ 2025 ಕಾರ್ಯಕ್ರಮದಲ್ಲಿ ಡಾ.ಎಂ.ಮೋಹನ ಆಳ್ವರಿಗೆ 2025ನೇ ಸಾಲಿನ ಕೃಷ್ಣೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೆ.ಅಮರನಾಥ ಶೆಟ್ಟಿ ವೃತ್ತದ ಬಳಿ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪಟ್ಲ ಸತೀಶ್ ಶೆಟ್ಟಿ, ಸಂಗೀತ ನಿರ್ದೇಶಕ ಯಶವಂತ ಎಂ.ಜಿ., ನಟ ದೀಕ್ಷಿತ್ ಕೆ.ಅಂಡಿಂಜೆ, ನಟ ಯುವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಉಮಾನಾಥ ಎ.ಕೋಟ್ಯಾನ್, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಗೋಪಾಲಕೃಷ್ಣ ದೇವಳದ ಆಡಳಿತ ಮೊಕ್ತೇಸರ ಗುರುಪ್ರಸಾದ್ ಹೊಳ್ಳ, ಪುರಸಭಾ ಸದಸ್ಯ ಪುರಂದರ ದೇವಾಡಿಗ, ವಕೀಲ ಶರತ್ ಶೆಟ್ಟಿ, ಕೆ.ಅಮರನಾಥ ಶೆಟ್ಟಿ ಫೌಂಡೇಶನ್‌ನ ಅಧ್ಯಕ್ಷೆ ಅಮರಶ್ರೀ ಶೆಟ್ಟಿ, ಮಕ್ಕಳ ತಜ್ಞ ಡಾ.ಮುರಳೀಕೃಷ್ಣ, ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ, ಉದ್ಯಮಿಗಳಾದ ಶ್ರೀಪತಿ ಭಟ್, ರಾಜೇಂದ್ರ, ನಟ ಅಜಯ್ ಮುಖ್ಯ ಅತಿಥಿಯಾಗಿದ್ದರು.

ಟ್ರಸ್ಟ್ ಕಾರ್ಯದರ್ಶಿ ದಿನೇಶ್ ನಾಯ್ಕ, ಟ್ರಸ್ಟಿ ರಂಜಿತ್ ಶೆಟ್ಟಿ, ಯುವ ಸಂಘಟನೆ ಸಂಚಾಲಕ ನಾರಾಯಣ ಪಡುಮಲೆ, ಸಂಘಟನಾ ಗುರುಪ್ರಸಾದ್ ಪೂಜಾರಿ, ಪ್ರಮುಖರಾದ ಸಂದೀಪ್ ಕೆಲ್ಲಪುತ್ತಿಗೆ, ರಾಜೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net