ಚಾಮುಂಡಿ ಸನ್ನಿಧಿಯಲ್ಲಿ ಕೃಷ್ಣ ಸ್ಮರಣೆ

16_Gpt_Chamundi 1
Published on

ಗುಂಡ್ಲುಪೇಟೆ: ಪಟ್ಟಣದ ಭಾವಸಾರ್ ಕ್ಷತ್ರಿಯ ಸಮಾಜದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಶನಿವಾರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಪೂಜೆ ನಡೆಸಲಾಯಿತು.ಅಮ್ಮನವರಿಗೆ ಮಂಗಳ ದ್ರವ್ಯಗಳಿಂದ ಅಭಿಷೇಕ ಮಾಡಿ ಚಾಮುಂಡೇಶ್ವರಿಯ ತೊಡೆಯ ಮೇಲೆ ಶ್ರೀಕೃಷ್ಣ ಕುಳಿತಿರುವ ರೀತಿ ನೂತನ ವಸ್ತ್ರಗಳಿಂದ ಅಲಂಕಾರ ಮಾಡಲಾಗಿತ್ತು. ಸಹಸ್ರನಾಮ ಮಹಾಮಂಗಳಾರತಿ ನಂತರ ಮಹಿಳೆಯರು ಕೃಷ್ಣ ನಾಮ ಸ್ವರಣೆ, ಭಜನೆಯನ್ನು, ಭಕ್ತಿಗೀತೆಗಳಿಂದ ಪ್ರಾರ್ಥಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net