ಅಂಗನವಾಡಿ ಮಕ್ಕಳಿಗೆ ಕೃಷ್ಣ-ರಾಧೆ ಸ್ಪರ್ಧೆ

krishna
ಕೊಲ್ಲೂರು ನವಶಕ್ತಿ ಮಹಿಳಾ ವೇದಿಕೆ ಆಶ್ರಯದಲ್ಲಿ ಜೂನಿಯರ್ ಕೃಷ್ಣ-ರಾಧೆ ಸ್ಪರ್ಧಾ ಕಾರ್ಯಕ್ರಮವನ್ನು ಸಹಿಪ್ರಾ ಶಾಲಾ ಮುಖ್ಯಶಿಕ್ಷಕಿ ಶಾರದಾ ಉದ್ಘಾಟಿಸಿದರು
Published on

ಬೈಂದೂರು: ಕೊಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗುರುವಾರ ನವಶಕ್ತಿ ಮಹಿಳಾ ವೇದಿಕೆ ಆಶ್ರಯದಲ್ಲಿ ಅಂಗನವಾಡಿ ಮಕ್ಕಳಿಗೆ ಜೂನಿಯರ್ ಕೃಷ್ಣ-ರಾಧೆ ಸ್ಪರ್ಧೆ ನಡೆಯಿತು.

ಪ್ರಾಥಮಿಕ ಮುಖ್ಯ ಶಿಕ್ಷಕಿ ಶಾರದಾ ಉದ್ಘಾಟಿಸಿದರು. ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ ಭಿಡೆ ಅಧ್ಯಕ್ಷತೆ ವಹಿಸಿದ್ದರು. ಸುಪರ್ಣಾ ಟ್ರಸ್ಟ್ ಅಧ್ಯಕ್ಷ ಕೆ.ರಮೇಶ ಗಾಣಿಗ ವಿಜೇತ ಮಕ್ಕಳಿಗೆ ಬಹುಮಾನದ ಪ್ರಾಯೋಜಕರಾಗಿದ್ದರು.

ಮಮತಾ ಕಲ್ಲೂರಾಯ, ಹೇಮಾವತಿ ನಾಯ್ಕ ತೀರ್ಪುಗಾರರಾಗಿದ್ದರು. ಸಂಘದ ಕಾರ್ಯದರ್ಶಿ ಜ್ಯೋತಿ ರಾಘವೇಂದ್ರ, ಜತೆ ಕಾರ್ಯದರ್ಶಿ ಜಯಲಕ್ಷ್ಮೀ, ಸದಸ್ಯರಾದ ಶಾರದಾ ಆಚಾರ್ಯ, ಸಂಗೀತಾ, ಯಶೋದಾ, ಶಾಂತಾ, ಸುಜಾತಾ ಆಚಾರ್ಯ, ಸುಗುಣ, ಸುಷ್ಮಾ, ಪೂಜಾ ಚಿಟ್ಟಾಣಿ, ರೂಪಾ, ಅಂಗನವಾಡಿ ಕಾರ್ಯಕರ್ತೆ ಸುಪ್ರಿಯಾ ಮತ್ತು ಮಕ್ಕಳ ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net