ಕಾಸರಗೋಡಿನಲ್ಲಿ ಶ್ರೀಕಷ್ಣ ಜಯಂತ್ಯುತ್ಸವ

New Project (8)
Published on

ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದ ಬಾಲಗೋಕುಲ ವತಿಯಿಂದ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜಯಂತ್ಯುತ್ಸವ ಭವ್ಯ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.

ಮೊಸರುಕುಡಿಕೆ ಸೇರಿದಂತೆ ವಿವಿಧ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಕೊರಕ್ಕೋಡು ಶ್ರೀ ಆರ್ಯಕಾರ್ತ್ಯಾಯಿನಿ ಕ್ಷೇತ್ರ ವಠಾರದಿಂದ ಆರಂಭಗೊಂಡ ಶ್ರೀಕೃಷ್ಣ ರಾಧೆಯರ ವೇಷಧಾರಿಗಳನ್ನೊಳಗೊಂಡ ಭವ್ಯ ಶೋಭಾಯಾತ್ರೆ ಕಾಸರಗೋಡು ನಗರದ ಪ್ರಧಾನ ಅಂಚೆ ಕಚೇರಿ, ಕೆ.ಪಿ.ಆರ್.ರಾವ್ ರೋಡ್, ಬ್ಯಾಂಕ್ ರಸ್ತೆ ಹಾದಿಯಾಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತಲುಪಿತು. ಶ್ರೀಕೃಷ್ಣ ಜನ್ಮಾಷ್ಟಮಿ ಬಾಲದಿನಾಚರಣೆ ಸಮಿತಿ ಅಧ್ಯಕ್ಷ ಸತೀಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಡಾ.ಅಜಯ್ ಕುಮಾರ್ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net