ಕೃಷ್ಣ ಜಗತ್ತಿನ ಮೊದಲ ಗುರು: ರಾಮಕೃಷ್ಣ ಭಟ್​ ಹೇಳಿಕೆ

Bel_Lord-Krishna
Published on

ಬೆಳ್ತಂಗಡಿ: ನಿಮ್ಮೊಳಗಿನ ಮಾತು ಆಡಲು ಶುರುವಾದರೆ ನೀವು ಗುರುಗಳಾಗಿರುತ್ತೀರಿ. ಎಲ್ಲ ಜವಾಬ್ದಾರಿಗಳ ಮಜಲುಗಳು, ನಿದ್ದೆ&ಮುದ್ದೆಗಳ ಸವಾಲುಗಳ ನಡುವೆ ಜೀವನವನ್ನು ಸಾಗಿಸಬೇಕು. ಅರಿವೇ ಗುರುವಾಗಬೇಕು ಎಂದು ಬೆಳಾಲು ಶ್ರೀ ಧ.ಮಂ.ಪ್ರೌಢ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ರಾಮಕೃಷ್ಣ ಭಟ್​ ಹೇಳಿದರು.

ಉಜಿರೆ ಶ್ರೀ ಧ.ಮಂ.ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ಕೃಷ್ಣ ಜಗತ್ತಿನ ಮೊದಲ ಗುರು. ಅರ್ಜುನ ಗಾಂಢೀವ ಕೆಳಗಿರಿಸಿದಾಗ ಶ್ರೀ ಕೃಷ್ಣ ಅರ್ಜುನನಲ್ಲಿ ಮೊದಲು ಕೇಳಿದ ಮಾತು, ನಿನ್ನನ್ನು ನೀನು ಉದ್ಧರಿಸಿಕೋ ಎಂಬುವುದು ಎಂದರು.

ಪ್ರಾಂಶುಪಾಲ ಪ್ರಮೋದ್​ ಕುಮಾರ್​ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ೇಮಪಾಲನಾಧಿಕಾರಿ ಯುವರಾಜ್​ ಪೂವಣಿ ಹಾಗೂ ಉಪಪ್ರಾಂಶುಪಾಲ ಡಾ.ರಾಜೇಶ್​ ಬಿ. ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸುಮೇಧಾ ಗಾಂವ್ಕರ್​ ಶಿಕ್ಷಕರ ದಿನದ ಮಹತ್ವ ಪ್ರಸ್ತುತಪಡಿಸಿದರು. ಧನ್ಯಾ ಮತ್ತು ಸೌಜನ್ಯಾ ಅತಿಥಿ ಪರಿಚಯ ಮಾಡಿದರು. ಸ್ವಪ್ನಾ ಸ್ವಾಗತಿಸಿದರು. ಶ್ರದ್ಧಾ ವಂದಿಸಿದರು. ಸಾ ಮತ್ತು ನಿಜ ಕುಲಾಲ್​ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರಿಂದ ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net