ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧ ಆಯ್ಕೆ

ಫೋಟೋ ಶೀರ್ಷಿಕೆ 07 ಸಿಆರ್_ಪಿ-2ಎ
Published on

ಚನ್ನರಾಯಪಟ್ಟಣ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನೂತನ ಉಪಾಧ್ಯಕ್ಷರಾಗಿ ಅಂತನಹಳ್ಳಿ ಕೃಷ್ಣೇಗೌಡ (ಸ್ವಾಮಿ) ಅವಿರೋಧ ಆಯ್ಕೆಯಾದರು.


ಜಗದೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಂತನಹಳ್ಳಿ ಕೃಷ್ಣೇಗೌಡ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸುನೀಲ್ ಅವಿರೊಧ ಆಯ್ಕೆಯನ್ನು ಘೋಷಿಸಿದರು. ಶಾಸಕ ಸಿ.ಎನ್.ಬಾಲಕೃಷ್ಣ, ರಾಜ್ಯ ಮಾರಾಟ ಮಹಾ ಮಂಡಳ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ನಿರ್ದೇಶಕರು ಅಭಿನಂದಿಸಿದರು.


ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ನೂತನ ಉಪಾಧ್ಯಕ್ಷರು ಹಿರಿಯ ನಿರ್ದೇಶಕರೊಂದಿಗೆ ಸೇರಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ. ಸಂಸ್ಥೆಯಿಂದ ಪೆಟ್ರೋಲ್ ಬಂಕ್ ಆರಂಭಿಸುವ ಗುರಿ ಹೊಂದಲಾಗಿದೆ ಎಂದರು.


ಗೋಪಾಲಕೃಷ್ಣ ಅವರ ನಿಧನದಿಂದ ಖಾಲಿ ಇದ್ದ ನಿರ್ದೇಶಕ ಸ್ಥಾನಕ್ಕೆ ತಾಲೂಕಿನ ಗುರಿಗಾರನಹಳ್ಳಿ ಯೋಗೀಶ್ ಅವರನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು. ಟಿಎಪಿಸಿಎಂಎಸ್ ಅಧ್ಯಕ್ಷ ನಂಜಪ್ಪ, ನಿರ್ದೇಶಕರಾದ ಬಿ.ಎಚ್.ಶಿವಣ್ಣ, ಎಂ.ಆರ್. ಅನಿಲ್‌ಕುಮಾರ್, ಪರಮ ಕೃಷ್ಣೇಗೌಡ, ಜಗದೀಶ್, ವಿ.ಎನ್.ರಾಜಣ್ಣ, ಯೋಗೀಶ್, ಮುನಿಸ್ವಾಮಿ, ಮನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net