

ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಜಾನಪದ ಕಲೆ ಮೆರುಗು ನೀಡಿದ್ದು, ಕಲಾ ತಂಡಗಳೊಡನೆ ಸಚಿವ ಕೃಷ್ಣಬೈರೇಗೌಡ ಹೆಜ್ಜೆ ಹಾಕಿದರು. ನಗರದ ಹೇಮಾವತಿ ಪ್ರತಿಮೆ ಎದುರು ಆಯೋಜನೆಗೊಂಡಿರುವ ಜಾನಪದ ಜಾತ್ರೆಗೆ ಚಾಲನೆ ನೀಡಿ ಕಲಾ ತಂಡಗಳೊಂದಿಗೆ ಹೆಜ್ಜೆ ಹಾಕಿದರು. ಜತೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್ ಕೂಡ ಕಲಾ ತಂಡಗಳೊಡನೆ ವೇದಿಕೆಯಲ್ಲಿ ಕುಣಿದು ಸಂಭ್ರಮಿಸಿದರು.