

ಬೆಂಗಳೂರು: ಸಂಜೋಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ‘ಕೃಷ್ಣಧ್ವನಿ’ ವಿಶೇಷ ಪ್ರಶಸ್ತಿಗೆ ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ ಭಾಜನರಾಗಿದ್ದಾರೆ.
ಪ್ರಶಸ್ತಿಯು ಒಂದು ಲಕ್ಷ ರೂ. ನಗದು, ಲಕ ಹಾಗೂ ಗೌರವ ಸನ್ಮಾನ ಒಳಗೊಂಡಿದೆ. ಟ್ರಸ್ಟ್ ವತಿಯಿಂದ ಜೆ.ಪಿ.ನಗರದ ಆರ್. ವಿ. ಡೆಂಟಲ್ ಕಾಲೇಜು ಸಭಾಂಗಣದಲ್ಲಿ ಮಾ. 16 ಮತ್ತು 17ರಂದು ಸಂಗೀತ ಸಮ್ಮೇಳನ - 2024 ಆಯೋಜಿಸಲಾಗಿದೆ. ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ವೇಳೆ ಪ್ರಶಸ್ತಿ ಪುರಸ್ಕೃತರಿಂದ ಹಿಂದೂಸ್ತಾನಿ ಗಾಯನ ಏರ್ಪಡಿಸಲಾಗಿದೆ.