ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್ಪೆಸಸ್ (ಕೆ&-ರೈಡ್) ಮಂಡಳಿಯು ಕಾರಿಡಾರ್&-2ಗಾಗಿ (ಮಲ್ಲಿಗೆ ಮಾರ್ಗ& ಬೆನ್ನಿಗಾನಹಳ್ಳಿ- ಮತ್ತು ಚಿಕ್ಕಬಾಣಾವರ) ಬಾಕಿ ಉಳಿದಿರುವ ಸಿವಿಲ್ ಕಾಮಗಾರಿಗಳಿಗೆ ಮೂರು ಪ್ಯಾಕೇಜ್ಗಳಲ್ಲಿ ಹೊಸ ಟೆಂಡರ್ಗಳನ್ನು ಆಹ್ವಾನಿಸಲು ಕೆ&-ರೈಡ್ಗೆ ನಿರ್ದೇಶಿಸಿದೆ.
ಎಲ್ ಆ್ಯಂಡ್ ಟಿ ಸಂಸ್ಥೆಯು ಕೆ&ರೈಡ್ ಜತೆ ಎರಡು ಒಪ್ಪಂದವನ್ನು ರದ್ದುಗೊಳಿಸಿದ ಹಿನ್ನೆಲೆ ಯಾವುದೇ ವಿಳಂಬವಿಲ್ಲದೆ ಕೆಲಸ ಮುಂದುವರಿಸಲು ಕ್ರಮಕ್ಕಾಗಿ ಕೆ&-ರೈಡ್ನ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರ ನೀಡಲಾಗಿತ್ತು. ಸರ್ಕಾರದ ಅಡ್ವೊಕೇಟ್ ಜನರಲ್ ಸಲಹೆಯ ಮೇರೆಗೆ ಮಧ್ಯಸ್ಥಿಕೆ ಪ್ರಕ್ರಿಯೆಗಳು ಚಾಲ್ತಿಯಲ್ಲಿರಿಸಿಕೊಂಡು ಬಾಕಿ ಇರುವ ಸಿವಿಲ್ ಕಾಮಗಾರಿಗಳಿಗೆ ಹೊಸ ಟೆಂಡರ್ಗಳನ್ನು ಆಹ್ವಾನಿಸಲು ನಿರ್ಧಾರಿಸಲಾಗಿದೆ. ಅದರಂತೆ, ಕಾರಿಡಾರ್ -2ಗಾಗಿ ಮೂರು ಪ್ಯಾಕೇಜ್ಗಳಲ್ಲಿ ಟೆಂಡರ್ ಕರೆಯಲಾಗುತ್ತದೆ ಮತ್ತು ಡಿ. 2025ರೊಳಗೆ ಟೆಂಡರ್ ಕಾರ್ಯಾದೇಶವನ್ನು ನೀಡಲಾಗುವುದು. ಕಾರಿಡಾರ್&-4 ಗಾಗಿ ಬಾಕಿ ಸಿವಿಲ್ ಕಾಮಗಾರಿಗಳಿಗೆ ನ.-2025 ರಲ್ಲಿ ಸೂಕ್ತ ಟೆಂಡರ್ ಪ್ಯಾಕೇಜ್ಗಳೊಂದಿಗೆ ಟೆಂಡರ್ಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಲಾಗಿದೆ.
ಎಲ್ ಆ್ಯಂಡ್ ಟಿ ಮನವಿಯಂತೆ ಕಾರಿಡಾರ್-&2 ಯೋಜನೆಯ ಗಡುವು ವಿಸ್ತರಿಸಲಾಗಿತ್ತು. 2026ರ ಸೆ. 30ರ ವರೆಗೆ ನಿಗದಿಯಾಗಿತ್ತು. ಇನ್ನು ಕಾರಿಡಾರ್-&4ರ ಯೋಜನೆಯ ಗಡುವು 2026ರ ಅಕ್ಟೋಬರ್ ಇತ್ತು. ಈ ಒಪ್ಪಂದಗಳಲ್ಲಿ ಎಲ್ ಆ್ಯಂಡ್ ಟಿಗೆ ಯಾವುದೇ ಒಪ್ಪಂದ ರದ್ದುಗೊಳಿಸುವ ಅಧಿಕಾರವಿರಲಿಲ್ಲ. ಆದರೂ, ಎಲ್ ಆ್ಯಂಡ್ ಟಿಯು ಜು. 31ರಂದು ಈ ಎರಡು ಕಾರಿಡಾರ್ ಒಪ್ಪಂದಗಳನ್ನು ತಕ್ಷಣದಿಂದಲೇ ರದ್ದುಗೊಳಿಸಿದೆ.
ಇದೀಗ ಎಲ್ ಆ್ಯಂಡ್ ಟಿ ಮತ್ತು ಕೆ& -ರೈಡ್ ನಡುವಿನ ಮಧ್ಯಸ್ಥಿಕೆ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರನ್ನು ಮೂವರು ಸದಸ್ಯರ ಮಂಡಳಿಯ ಮಧ್ಯಸ್ಥಿಕೆದಾರರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ಗೌರವಾನ್ವಿತ ವಾಣಿಜ್ಯ ನ್ಯಾಯಾಲಯವು ಎಲ್ ಆ್ಯಂಡ್ ಟಿಯ ಬ್ಯಾಂಕ್ ಗ್ಯಾರಂಟಿಯನ್ನು ನಗದೀಕರಿಸುವ ಬಗ್ಗೆ ನೀಡಿರುವ ತಡೆಯಾಜ್ಞೆಯನ್ನು ಕೆ&-ರೈಡ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ.