

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅತಿಯಾದ ಮಳೆಯಿಂದ ಬೆಳೆ ನೀರು ಪಾಲಾಗಿದೆ. ಹೀಗಾಗಿ ರೈತರು ಚಿಂತಾಜನಕ ಸ್ಥಿತಿಯಲ್ಲಿದ್ದು, ಬೆಳೆ ನಷ್ಟ ಸಮೀಕ್ಷೆ ಮಾಡಿ ಪರಿಹಾರ ಕೊಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ರಸ್ತೆತಡೆ ಮೂಲಕ ಪ್ರತಿಭಟನೆ ನಡೆಸಿದರು.
ಬೆಳೆ ವಿಮೆ ಜಾರಿ ಮಾಡಬೇಕು, ತೊಗರಿ ನಾಡಿಗೆ ವಿಶೇಷ ಪ್ಯಾಕೇಜï ನೀಡಬೇಕು, ತೊಗರಿ ನಾಡು ಅತಿವೃಷ್ಟಿ ಘೋಷಣೆ ಮಾಡಬೇಕು. ಮಳೆಯಿಂದ ಹಾನಿಯಾದ ತೊಗರಿ, ಹೆಸರು, ಉದ್ದು, ಸೋಯಾ ಬೆಳೆ ನೀರುಪಾಲಾಗಿದೆ.
ಬಾಕಿ ಇರುವ ಬೆಳೆವಿಮೆ ಪರಿಹಾರದ ಮೊತ್ತ ರೈತರಿಗೆ ಬೇಗ ನೀಡಬೇಕು, ಬೆಂಬಲ ಬೆಲೆ ಕಾನೂನು ಜಾರಿ ಮಾಡಿ ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗ ವರದಿಯ ಪ್ರಕಾರ ಸಿ೨ಪ್ಲಸ್೫೦ ಸೇರಿಸಿ ಎಂಎಸ್‌ಪಿ ನೀಡಬೇಕು, ಗಂಡೋರಿ, ಬೆಣ್ಣೆತೊರಾ, ಚಂದ್ರAಪಳ್ಳಿ, ಭೀಮಾ ನದಿ ನೀರು ತುಂಬಿಕೊAಡಿದ್ದು, ವಾಣಿಜ್ಯ ಬೆಳೆಗಳಾದ ತೊಗರಿ, ಹೆಸರು, ಉದ್ದು, ಸೋಯಾಬಿನ್, ಹತ್ತಿ ಬೆಳೆ ಹಾನಿಗೊಳಗಾಗುವ ಸಂಭವ ಇದೆ. ಹೀಗಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡುವ ಕಾರ್ಯ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಅತಿವೃಷ್ಠಿಯಿಂದ ರಸ್ತೆಗಳು ಹಾಳಾಗಿವೆ. ಬಡವರ ಅನೇಕ ಮನೆಗಳು ನೆಲಕ್ಕುರುಳಿವೆ. ಅನೇಕ ವಿದ್ಯಾಸಂಸ್ಥೆಗಳು ಸೋರುತ್ತಿವೆ. ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಜಿಲ್ಲೆಯಲ್ಲಿ ಸಾಲದ ಭಾದೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು, ಕಾಳಗಿ ತಾಲೂಜು ರಟಕಲ್ ಗ್ರಾಮದ ರೈತ ತನ್ನ ಹೊಲದಲ್ಲಿ ನೇಣಿಗೆ ಶರಣಾದ ನಾಗಣ್ಣ ಸೇರಿ ಅನೇಕರು ಮತ್ತು ಕಲಬುರಗಿ ತಾಲೂಕು ಕವಲಗಾ ಬಿ ಗ್ರಾಮದ ರೈತರ ಹಣಮಂತ ಮೊಸಂಡಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಕೃಷಿ ಸಚಿವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿಪತ್ರ ಸಲ್ಲಿಸಿದರು. ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ರಾಯಪ್ಪ ಹುರಮುಂಜಿ, ದಿಲೀಪ್ ನಾಗೂರೆ, ಎಂ.ಬಿ.ಸಜ್ಜನ್, ಅಲ್ತಾಫ್ ಇನಾಂದಾರ, ಚಂದ್ರಪ್ಪ ಪೂಜಾರಿ, ರೇವಣಸಿದ್ದಪ್ಪ ಪಾಟೀಲ್, ಕಾಶಿನಾಥ ಬಂಡಿ, ಸಿದ್ದರಾಮ ಧಣ್ಣೂರು, ಅಶೋಕ ಹೂಗಾರ, ಹಣಮಂತ ತಳವಾರ, ಸಾಯಬಣ್ಣ ಕವಲಗಾ ಇತರರಿದ್ದರು.