ಕೆಪಿಸಿಎಲ್​ ನೇಮಕಾತಿ ಅಂಕಪಟ್ಟಿ ಪ್ರಕಟ

KPCL
Published on

ಬೆಂಗಳೂರು: ಕರ್ನಾಟಕ ವಿದ್ಯುತ್​ ನಿಗಮ ನಿಯಮಿತದಲ್ಲಿನ (ಕೆಪಿಸಿಎಲ್​) 622 ಹುದ್ದೆಗಳನ್ನು ತುಂಬಲು ಫೆಬ್ರವರಿ 18ರಂದು ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವೆಬ್​ಸೈಟ್​ನಲ್ಲಿ ಬುಧವಾರ ಪ್ರಕಟಿಸಿದೆ.

ಆಕ್ಷೇಪಣೆಗಳ ಪರಿಶೀಲನೆ ನಂತರ, ಕಳೆದ ಬಾರಿಯಂತೆಯೇ ಪ್ರತಿ ತಪ್ಪು ಉತ್ತರಕ್ಕೆ 1/3 ನಕಾರಾತ್ಮಕ ಅಂಕ ಕಡಿತಗೊಳಿಸಿ ಅಂತಿಮ ಅಂಕಪಟ್ಟಿ ಸಿದ್ಧಪಡಿಸುವಂತೆ ಕೆಪಿಸಿಎಲ್​ ಲಿಖಿತ ರೂಪದಲ್ಲಿ ತಿಳಿಸಿತ್ತು. ಆ ಪ್ರಕಾರವಾಗಿ, ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿ ಸಿದ್ಧಪಡಿಸಲಾಗಿದೆ.

ಅಂತಿಮ ಅಂಕಪಟ್ಟಿಯನ್ನು ಕೆಪಿಸಿಎಲ್​ಗೆ ಹಸ್ತಾಂತರಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೆಪಿಸಿಎಲ್​ನ ಎಇ, ಜೆಇ (ವಿವಿಧ ವಿಭಾಗಗಳ), ಕೆಮಿಸ್ಟ್​ ಮತ್ತು ಕೆಮಿಕಲ್​ ಸೂಪರ್​ವೈಸರ್​ ಹುದ್ದೆಗಳ ನೇಮಕಾತಿಗಾಗಿ ಈ ಪರೀೆ ನಡೆಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net