ಕೊತ್ತೇಗಾಲ ಗ್ರಾಪಂಗೆ ಪುಷ್ಪಾ ಅಧ್ಯಕ್ಷೆ

ಕೊತ್ತೇಗಾಲ ಗ್ರಾಪಂಗೆ ಪುಷ್ಪಾ ಅಧ್ಯಕ್ಷೆ
Published on

ತಿ.ನರಸೀಪುರ: ತಾಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಪುಷ್ಪಾ ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ಕೆ.ಎಂ.ಬಸವರಾಜು ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಮೀನಾಕ್ಷಿ, ವನಜಾಕ್ಷಮ್ಮ ಅವರು ರಾಜೀನಾಮೆ ನೀಡಿದ ಹಿನ್ನೆಲೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಪುಷ್ಪಾ ಮಹದೇವಸ್ವಾಮಿ ಹಾಗೂ ಪ.ಜಾತಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎಂ.ಬಸವರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಗ್ರಾಮ ಪಂಚಾಯಿತಿಯ 18 ಸದಸ್ಯರು ಪ್ರಕ್ರಿಯೆಯಲ್ಲಿ ಭಾಗವಹಿಸಿ, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಗೆ ಸಹಮತ ಸೂಚಿಸಿದರು. ಚುನಾವಣಾಧಿಕಾರಿಯಾಗಿ ಬನ್ನೂರು ಕಾವೇರಿ ನೀರಾವರಿ ನಿಗಮದ ಎಇಇ ರತೀಶ್ ಕಾರ್ಯ ನಿರ್ವಹಿಸಿದರು.

ಸದಸ್ಯರಾದ ವನಜಾಕ್ಷಮ್ಮ, ಬಿ.ಮಹೇಶ್, ಮಲ್ಲೇಶ್, ಆರ್.ನಾಗಮಣಿ, ಮಹಾದೇವಿ, ಭಾಗ್ಯಮ್ಮ, ಮರಿಸ್ವಾಮಿ, ನಾಗೇಂದ್ರ, ಮೀನಾಕ್ಷಿ, ಲಕ್ಷ್ಮಣ, ಲೀಲಾವತಿ, ಸಿ.ಮಣಿಕಂಠ, ಶಿವಮ್ಮ, ರಾಜಮ್ಮ, ಮಹದೇವಸ್ವಾಮಿ, ಕೆ.ಬಿ.ಬಸವರಾಜು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ತಾ.ಪಂ.ಮಾಜಿ ಸದಸ್ಯ ಸೀಹಳ್ಳಿ ಗುರುಮೂರ್ತಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರ, ಪಿಡಿಒ ಶ್ರೀನಿವಾಸ್, ಮುಖಂಡರಾದ ಕು.ಶಿ.ಭೃಂಗೇಶ್, ಮಹದೇವಸ್ವಾಮಿ, ಕೆ.ಬಿ.ರಾಜಪ್ಪ, ಮಹದೇವಪ್ರಸಾದ್, ಕೆ.ಪಿ.ಶಿವಕುಮಾರ್, ಗುರುಸ್ವಾಮಿ, ಮಾಡ್ರಹಳ್ಳಿ ಬಾಬು, ನಾಗೇಂದ್ರಸ್ವಾಮಿ, ಕನ್ನಹಳ್ಳಿ ಬಸವರಾಜು, ಶಿವಕುಮಾರ್, ಕೊತ್ತೆಗಾಲ ಬಸವರಾಜು, ಕೆ.ಆರ್. ಚಿಕ್ಕಸ್ವಾಮಿ, ಗುತ್ತಿಗೆದಾರ ಶಾಂತಮೂರ್ತಿ, ಪಟೇಲ್ ಶಿವಕುಮಾರಸ್ವಾಮಿ, ಕುರುಬೂರು ಶಿವಕುಮಾರ್, ಲೋಕೇಶ್, ಶಿವಮಲ್ಲಯ್ಯ, ಕರೋಹಟ್ಟಿ ಗ್ರಾ.ಪಂ. ಉಪಾಧ್ಯಕ್ಷ ರೇವಣ್ಣ, ಗುಮಾಸ್ತ ವಿಶ್ವನಾಥ್, ಬಿಲ್ ಕಲೆಕ್ಟರ್ ಮಹೇಶ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net