ಕೋಟಿ ಚೆನ್ನಯ್ಯ ಸಂಘದ ಮಹಾಸಭೆ

koti chenneya
ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಶ್ರೀಸಿದ್ಧಿ ಶ್ರೀನಿವಾಸ ಪೂಜಾರಿ, ನಾರಾಯಣ.ಕೆ, ಸರೋಜಾ ಮೋಹನ್, ನಾಗೇಶ್ ಪೂಜಾರಿ ಮೊದಲಾದವರಿದ್ದರು.
Published on

ಕೋಟ: ಇಲ್ಲಿನ ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಶನಿವಾರ ಸಂಘದ ಅಧ್ಯಕ್ಷ ಶ್ರೀಸಿದ್ಧಿ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಿಇಒ ನಾರಾಯಣ.ಕೆ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಬಳಿಕ ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ನಿರ್ದೇಶಕ ಸತೀಶ.ಕೆ ನಾಯ್ಕ ಅವರನ್ನು ಮತ್ತು ಕಟ್ಟಡ ಮಾಲಕಿ ನಮಿತಾ ಪ್ರಭು ಅವರನ್ನು ಗೌರವಿಸಲಾಯಿತು.

ಉಪಾಧ್ಯಕ್ಷೆ ಸರೋಜಾ ಮೋಹನ್, ನಿರ್ದೇಶಕರಾದ ನಾಗೇಶ್ ಪೂಜಾರಿ ಬಾಳೆಬೆಟ್ಟು, ಅಶೋಕ ಪೂಜಾರಿ ಸಾಲಿಗ್ರಾಮ, ಜಯಂತಿ ಮಣೂರು ಪಡುಕರೆ, ಸಂತೋಷ ಪೂಜಾರಿ ಮಣೂರು, ನವೀನ ಬಣ್ಣದಬೈಲು, ಜನಾರ್ದನ ಪೂಜಾರಿ ಚಿತ್ರಪಾಡಿ, ಕೋಟಿಪೂಜಾರಿ ಮಧುವನ, ಪುಷ್ಪ.ಕೆ ಹಂದಟ್ಟು, ಉಪಸ್ಥಿತರಿದ್ದರು. ಮನೋಜ ಪೂಜಾರಿ ಸ್ವಾಗತಿಸಿದರು. ಪುಷ್ಪ.ಕೆ ಹಂದಟ್ಟು ವಂದಿಸಿದರು. ಸುಜಾತಾ ಬಾಯರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net