ವಿಜಯವಾಣಿ ಸುದ್ದಿಜಾಲ ಬೈಂದೂರು
ಸಂಘದಲ್ಲಿ ಗ್ರಾಹಕರು ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸಿದಾಗ ಸೊಸೈಟಿ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಅಲ್ಲದೆ ಒಂದು ವರ್ಷದ ಅವಧಿಯಲ್ಲಿ ನಮ್ಮ ಸಂಘದಿಂದ ನಾಲ್ಕು ಶಾಖೆಗಳನ್ನು ಪ್ರಾರಂಭಿಸಲಾಗಿದೆ ಎಂದು ಶಿರೂರು ಚಾರೋಡಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ರಾಮಚಂದ್ರ ಬಿ. ಶಿರೂರಕರ್ ಹೇಳಿದರು.
ಹಡವಿನಕೋಣೆ ಶ್ರೀ ಗಣೇಶ ಸೇವಾ ಸಂಘ ಚಾರೋಡಿ ಮೇಸ್ತ ಸಮಾಜದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ನಿರ್ದೇಶಕರಾದ ಉಮೇಶ್ ಎಲ್. ಮೇಸ್ತ ಬೆಣ್ಣೆಗೆರೆ, ನಾರಾಯಣ ಡಿ. ಆಚಾರಿ ಶಿರಸಿ, ರುಕ್ಮ ಶಿವಮೊಗ್ಗ, ರಾಜೇಂದ್ರ ಸಾಗರ, ಎಸ್.ಶ್ರೀಧರ ಶಿವಮೊಗ್ಗ, ರಾಘವೇಂದ್ರ ಮೇಸ್ತ ಬೆಂಗಳೂರು, ವಿನಯಾ ಆರ್. ಮೇಸ್ತ ಶಿರೂರು, ಪ್ರದೀಪ ಬಾಬುರಾವ್ ಮೇಸ್ತ ಹೊನ್ನಾವರ, ಹರೀಶ ಜಿ. ಮೇಸ್ತ ಗುಜ್ಜಾಡಿ, ಸುಜಾತಾ ಯೋಗೀಶ ಮೇಸ್ತ ಹೊನ್ನಾವರ, ಚಂಪಾ ಆರ್. ಶಿರೂರಕರ್, ಬಾಲಚಂದ್ರ ಮೇಸ್ತ ಶಿರಸಿ ಉಪಸ್ಥಿತರಿದ್ದರು.
ಅಣ್ಣಪ್ಪ ವಿ. ಮೇಸ್ತ ಶಿರೂರು ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕಿ ಸುಜಾತಾ ಸ್ವಾಗತಿಸಿದರು. ಉಪಾಧ್ಯಕ್ಷ ಕೃಷ್ಣಮೂರ್ತಿ ವಿ. ಆಚಾರ್ ಸಾಗರ ಪ್ರಸ್ತಾವನೆಗೈದರು. ಸಿಇಒ ವಿಜಯ್ ಕುಮಾರ್ ಮೇಸ್ತ ವರದಿ ಮಂಡಿಸಿದರು. ನಿರ್ದೇಶಕ ರಾಜೇಂದ್ರ ಸಾಗರ ವಂದಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ, ಶಿಕ್ಷಕ ರಾಮನಾಥ ಮೇಸ್ತ ಶಿರೂರು ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಗೌರಿ ಮೇಸ್ತ, ಅನುಷಾ ಮೇಸ್ತ, ಮಂಜುನಾಥ್ ಶೇಟ್, ರಾಘವೇಂದ್ರ ಮೇಸ್ತ, ಕಿರಣ್ ಮೇಸ್ತ, ವೈಶಾಲಿ ಮೇಸ್ತ, ಜ್ಯೋತಿ ಮೇಸ್ತ, ವಂದನಾ ಮೇಸ್ತ ಸಹಕರಿಸಿದರು.