ಕೋಟೆಕಾರು ಪಪಂ ಬಿಜೆಪಿ ಪಾಲು

kotekaaru
Published on

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ದಿವ್ಯಾ ಸತೀಶ್ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಪ್ರವೀಣ್ ಬಗಂಬಿಲ ಆಯ್ಕೆಯಾಗಿದ್ದಾರೆ. ಆ ಮೂಲಕ ಪ.ಪಂ.ಗೆ ಚುನಾವಣೆ ನಡೆದು 30 ತಿಂಗಳ ಬಳಿಕ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬಂದಿದೆ. 2021ರ ಡಿಸೆಂಬರ್ 27ರಂದು ಚುನಾವಣೆ ನಡೆದಿತ್ತು.

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ(ಎ) ಮೀಸಲಾತಿ ಬಂದಿತ್ತು. 17 ಸ್ಥಾನವುಳ್ಳ ಪಂಚಾಯಿತಿಯಲ್ಲಿ ಬಿಜೆಪಿ 11, ಕಾಂಗ್ರೆಸ್ 4, ಎಸ್ಡಿಪಿಐ ಮತ್ತು ಪಕ್ಷೇತರರು ತಲಾ ಒಂದು ಸ್ಥಾನ ಗೆದ್ದಿದ್ದರು. ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ದಿವ್ಯಾ ಸತೀಶ್ ಶೆಟ್ಟಿ, ಪಕ್ಷೇತರ ಸದಸ್ಯ ಹರೀಶ್ ರಾವ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಪ್ರವೀಣ್ ಬಗಂಬಿಲ ಮತ್ತು ಕಾಂಗ್ರೆಸ್‌ನ ಅಹಮ್ಮದ್ ಬಾವ ನಾಮಪತ್ರ ಸಲ್ಲಿಸಿದ್ದರು. ಸಂಸದ ಬ್ರಿಜೇಶ್ ಚೌಟ ಮತ ಸೇರಿ 12 ಮತಗಳು ಬಿಜೆಪಿ ಅಭ್ಯರ್ಥಿಗಳಿಗೆ ಲಭಿಸಿದೆ.

ಪಕ್ಷೇತರ ಸದಸ್ಯ ಹರೀಶ್ ರಾವ್ ಮತ್ತು ಕಾಂಗ್ರೆಸಿನ ಅಹಮ್ಮದ್ ಬಾವ ಅಜ್ಜಿನಡ್ಕ ಅವರು 6 ಮತಗಳನ್ನು ಪಡೆದರು. ಉಳ್ಳಾಲ ತಹಸೀಲ್ದಾರ್ ಪುಟ್ಟರಾಜು ಡಿ.ಎ. ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net