

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಬುಧವಾರ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ವೀಕ್ಷಿಸಿದರು. ಕಾಮಗಾರಿಯಲ್ಲಾದ ಕೆಲವೊಂದು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಗಮನ ಸೆಳೆದರು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗೆ ತ್ಯಾಜ್ಯ ನಿರ್ವಣೆಗಾಗಿ ಬೇಕಾದಷ್ಟು ಸ್ಥಳಾವಕಾಶ ಇದ್ದು, ಪ್ರಸ್ತುತ ಕಿನ್ನಿಗೋಳಿ ಸ್ಮಶಾನ ಮತ್ತು ಪಟ್ತಣ ಪಂಚಾಯಿತಿ ವ್ಯಾಪ್ತಿಯ ಕಲ್ಲಕುಮೇರು ಬಳಿ ಭವಿಷ್ಯದ ತ್ಯಾಜ್ಯ ನಿರ್ವಹಣೆ ದೃಷ್ಟಿಯಿಂದ ಸ್ಥಳ ಕಾದಿರಿಸಲಾಗಿದೆ. ಆದರೆ ಕಟೀಲು ಸಮೀಪಮತ್ತೆ ಗೋಮಾಳ ಜಾಗವನ್ನು ತ್ಯಾಜ್ಯ ವಿಲೇವಾರಿಗೆ ಕಾದಿರಿಸಲಾಗಿದೆ. ಇದನ್ನು ರದ್ದುಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಕಿನ್ನಿಗೋಳಿಯ ಬಿತ್ತುಲು ಪ್ರದೇಶದಲ್ಲಿ ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆ ಇಲ್ಲದೆ, ಕಿನ್ನಿಗೋಳಿ ಪ್ರದೇಶದ ಮಲಿನ ನೀರು ತೆರೆದ ಚರಂಡಿಯಲ್ಲಿ ಹರಿಯುವಂತಾಗಿದೆ. ಅದರ ಬಗ್ಗೆ ಗಮನಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.
ಪ್ರತಿಕ್ರಿಯಿಸಿದಜಿಲ್ಲಾಧಿಕಾರಿ, ಕಿನ್ನಿಗೋಳಿಯ ತ್ಯಾಜ್ಯ ನಿರ್ವಹಣೆ ಮತ್ತು ದ್ರವ ತ್ಯಾಜ್ಯ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಕರೆದು ಪ್ರತ್ಯೇಕ ಸಭೆ ಕರೆಯಲಾಗುವುದು ಎಂದರು.
ತಹಶಿಲ್ದಾರ್ ದಿಲೀಪ್ ಕುರ್ಡೇಕರ್, ಕಂದಾಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಇಂಜಿನಿಯರ್ ನಾಗರಾಜ್ ಸಂಜೀವ ಕಟೀಲು, ಪ್ರಕಾಶ್ ಕಿನ್ನಿಗೋಳಿ, ಭುವನಾಭಿರಾಮ ಉಡುಪ, ಡೋನಾಲ್ಡ್, ವಿಲಿಯಂ ಮಥಾಯಿಸ್, ನವೀನ್ ಡಿಸೋಜ, ಹಿಲ್ಡಾ ಡಿಸೋಜ, ಸುನೀಲ್ ಸಿಕ್ವೇರಾ ಮತ್ತಿತರರಿದ್ದರು.