ಕೋಟ ವಿವೇಕ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ

kota (2)
Published on

ಕೋಟ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಸಂಸತ್ತಿನ ರಚನೆ, ಅದರ ಪ್ರಕ್ರಿಯೆ, ಆಡಳಿತ ವೈಖರಿಯ ಬಗ್ಗೆ ತಿಳಿಯಲು ಶಾಲೆಗಳಲ್ಲಿ ರಚನೆಯಾಗುವ ವಿದ್ಯಾರ್ಥಿ ಸಂಘ ಅಡಿಪಾಯವಾಗುತ್ತದೆ ಎಂದು ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದರು.

ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಾಂಶುಪಾಲ ಜಗದೀಶ ನಾವಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕ ಇ. ಪ್ರೇಮಾನಂದ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಗಣೇಶ್ ಕುಮಾರ್ ಶೆಟ್ಟಿ, ಉಪನ್ಯಾಸಕಿ ರತಿಬಾಯಿ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿ ನಾಯಕ ಸುಶಾನ್ ಶೆಟ್ಟಿ ಸ್ವಾಗತಿಸಿದರು. ಉಪ ನಾಯಕ ಸಮೃದ್ಧ ಜೀವನ್ ವಂದಿಸಿದರು, ವಿದ್ಯಾರ್ಥಿನಿ ಸಾತ್ವಿಕಾ ಶ್ರೀಯಾನ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net