ಕೊರವಡಿ ಮಹಾಂಕಾಳಿ ಫ್ರೆಂಡ್ಸ್ 24ನೇ ವರ್ಷೋತ್ಸವ ಸಂಭ್ರಮ ನಮ್ಮೂರ ಪರ್ವ -2024

Nammura parva
ಕೊರವಡಿ ಮಹಾಂಕಾಳಿ ಫ್ರೆಂಡ್ಸ್ 24ನೇ ವರ್ಷೋತ್ಸವ ಸಂಭ್ರಮ ನಮ್ಮೂರ ಪರ್ವ-2024 ಕಾರ್ಯಕ್ರಮದಲ್ಲಿ ಸಮಾಜಸೇವಕ ಈಶ್ವರ ಮಲ್ಪೆ ಅವರನ್ನು ಸನ್ಮಾನಿಸಲಾಯಿತು
Published on

ಕೋಟ: ಸಾಧಕರನ್ನು ಗುರುತಿಸಿ ಅವರಿಗೆ ವಿಶೇಷ ಗೌರವ ಸಲ್ಲಿಸುವ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಜಿಪಂ ಮಾಜಿ ಸದಸ್ಯ ಗಣಪತಿ ಟಿ.ಶ್ರೀಯಾನ್ ಹೇಳಿದರು.

ಕೊರವಡಿ ಮಲಸಾವರಿ ದೇಗುಲದ ವಠಾರದಲ್ಲಿ ಕೊರವಡಿ ಮಹಾಂಕಾಳಿ ಫ್ರೆಂಡ್ಸ್ 24ನೇ ವರ್ಷೋತ್ಸವ ಸಂಭ್ರಮ ನಮ್ಮೂರ ಪರ್ವ -2024 ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಸಮಾಜಸೇವಕ ಈಶ್ವರ ಮಲ್ಪೆ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಸೈನಿಕ ರವೀಂದ್ರ ಕಾಂಚನ್ ಹುಟ್ಟೂರ ಅಭಿನಂದನೆ ಸಲ್ಲಿಸಲಾಯಿತು. ಕುಂಭಾಶಿ ಗ್ರಾಪಂ ಅಧ್ಯಕ್ಷ ಆನಂದ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಹಾಂಕಾಳಿ ದೈವಸ್ಥಾನ ಆನುವಂಶಿಕ ಮೊಕ್ತೇಸರ ಲಕ್ಷ್ಮೀ ಹತ್ವಾರ್, ಕೊರವಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಮಾಲತಿ ಶೆಟ್ಟಿ, ಮಹಾಂಕಾಳಿ ದೈವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸೋಮ ಕಾಂಚನ್, ಮಹಾಂಕಾಳಿ ಫ್ರೆಂಡ್ಸ್ ಅಧ್ಯಕ್ಷ ಗಣೇಶ್ ಚಂದನ್ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ವಿಜಯ ಶ್ರೀಯಾನ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಹರೀಶ್ ಚಂದನ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net