

ನಾಪೋಕ್ಲು: ಇಲ್ಲಿಗೆ ಸಮೀಪದ ಈಸ್ಟ್ ಕೊಳಕೇರಿ ಶ್ರೀ ಮಹಾದೇವ ಕೋಟ ಈಶ್ವರ ದೇವಾಲಯದ ವಾರ್ಷಿಕೋತ್ಸವ ಮೆ 10ರಂದು ಶನಿವಾರ ನಡೆಯಲಿದೆ.
ಅಂದು ಬಿದ್ದಾಟಂಡ ವಾಡೆ ನಡೆಸಲು ತೀರ್ಮಾನಿಸಲಾಗಿದೆ. ಶ್ರೀ ಮಹಾದೇವ ಕೋಟ ಈಶ್ವರ ದೇವಾಲಯದ ವಾರ್ಷಿಕೋತ್ಸವ ಪ್ರಯುಕ್ತ ಶನಿವಾರ ಬೆಳಗ್ಗೆ 7ಗಂಟೆಯಿಂದ 8ಗಂಟೆವರೆಗೆ ಗಣ ಹೋಮ, 9ಗಂಟೆ ಯಿಂದ 12ಗಂಟೆ ವರೆಗೆ ಶತ ರುದ್ರಾಭಿಷೇಕ ಹಾಗೂ ರುದ್ರಾಭಿಷೇಕ ಪೂಜೆ, 12ರಿಂದ ಮಹಾ ಪೂಜೆ ನಡೆಯಲಿದೆ.
ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕ್ರಪೆಗೆ ಪಾತ್ರರಾಗಬೇಕೆಂದು ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ಮನವಿಮಾಡಿದ್ದಾರೆ.