

ಕೋಟ: ರೋಟರಿ ಕ್ಲಬ್ ಕೋಟ ಸಿಟಿ ಸದಸ್ಯತ್ವ ಅಭಿವೃದ್ಧಿಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಪ್ರಶಸ್ತಿ ಪಡೆಯುವುದರೊಂದಿಗೆ ಒಟ್ಟು 12 ಜಿಲ್ಲಾ ಪ್ರಶಸ್ತಿ ಪಡೆದುಕೊಂಡಿದೆ. ಇತ್ತೀಚೆಗೆ ಪಾಂಡೇಶ್ವರ ಹೋಟೆಲ್ ಕೋಸ್ಟಲ್ ಪ್ಯಾರಾಡೈಸ್‌ನಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರದಾನ ಸವಾರಂಭದಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್ ದೇವಾನಂದ ರೋಟರಿ ಕೋಟ ಸಿಟಿ ನಿಕಟಪೂರ್ವ ಅಧ್ಯಕ್ಷ ಅನಿಲ್ ಸುವರ್ಣ ಅವರಿಗೆ ಪ್ರಶಸ್ತಿ ಪ್ರದಾನ ವಾಡಿ ಅಭಿನಂದಿಸಿದರು. ಕಳೆದ ಸಾಲಿನಲ್ಲಿ ಕ್ಲಬ್ ವಾಡಿದ ಸವಾಜಮುಖಿ ಕಾರ್ಯಕ್ರಮ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಜಿಲ್ಲಾ ಗವರ್ನರ್ ಪಾಲಾಕ್ಷ ಕೆ., ಅವಾರ್ಡ್ಸ್ ಕಮಿಟಿ ಚೇರ್‌ಮನ್ ಬಿ.ಸಿ.ಗೀತಾ, ವೈಸ್ ಚೇರ್‌ಮನ್ ಜೈ ಕಿಶನ್ ಶೆಟ್ಟಿ, ಕ್ಲಬ್‌ನ ನಿಕಟಪೂರ್ವ ಕಾರ‌್ಯದರ್ಶಿ ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.