

ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶದಲ್ಲಿ ವಜ್ರಾಭರಣ ಮಾರಾಟ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಿರುವ ದಿ ಡೈಮಂಡ್ ಫ್ಯಾಕ್ಟರಿ (ಟಿಡಿಎಫ್)ಯು ಕೃಷ್ಣನೂರು ಉಡುಪಿಯಲ್ಲಿ ನವರಾತ್ರಿ ಆರಂಭದ ಶುಭದಿನದಂದು ತನ್ನ ಹೊಸ ಶಾಖೆಯನ್ನು ಶುಭಾರಂಭಗೊಳಿಸಿದೆ.
ಉಡುಪಿ ನಗರದ ಹೃದಯ ಭಾಗದಲ್ಲಿರುವ ಗೀತಾಂಜಲಿ ರಸ್ತೆ ಮಾರ್ಗದಲ್ಲಿನ ಪಿವಿಎಸ್ ಟವರ್ (ಟಿವಿಎಸ್ ಮೋಟಾರ್ ಶೋರೂಂ ಮುಂಭಾಗ)ನಲ್ಲಿ ಗೋಲ್ಡ್, ಡೈಮಂಡ್, ಅನ್ಕಟ್, ಪ್ಲಾಟಿನಮ್ ಹಾಗೂ ಸಿಲ್ವರ್ ಆಭರಣಗಳ ಮಳಿಗೆ ತೆರೆದಿದೆ.
ಟಿಡಿಎಫ್ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಡಿಂಪಿ, ರೋಶನಿ, ಶ್ವೇತಾ, ಪ್ರೇಮಲತಾ ಎಸ್. ಹೆಗ್ಡೆ, ಜಯಲಕ್ಷ್ಮೀ ಜೆ. ಹೆಗ್ಡೆ, ಉಷಾಲತಾ ಶೆಟ್ಟಿ, ಕೃಷ್ಣಕುಮಾರಿ ಇತರರು ಉಪಸ್ಥಿತರಿದ್ದರು.
ಉಡುಪಿ-ಮಂಗಳೂರಿನಲ್ಲಿ ಕಳೆದ 16 ವರ್ಷದಿಂದ ಟಿಡಿಎಫ್ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸುತ್ತಿದ್ದೆವು. ಮಂಗಳೂರಿನಲ್ಲಿ ಔಟ್ಲೆಟ್ ಹೊಂದಿದ್ದು, ಉಡುಪಿಯಲ್ಲೂ ಮಳಿಗೆ ತೆರೆಯಬೇಕೆಂಬ ಕನಸಿತ್ತು. ಅದು ನವರಾತ್ರಿಯ ಶುಭದಿನದಂದು ಆರಂಭಗೊಂಡಿದೆ. ಗ್ರಾಹಕರಿಗೆ ನಗುಮೊಗದ ಸೇವೆಯೊಂದಿಗೆ ಗುಣಮಟ್ಟದ ಆಭರಣ ಒದಗಿಸಲು ಟಿಡಿಎಫ್ ಬದ್ಧವಿದೆ. | ವಿರಾಜ ಹೆಗ್ಡೆ, ಸುಧಾ ಶೆಟ್ಟಿ. ಅಸೋಸಿಯೇಟ್ ಪಾರ್ಟ್ನರ್ಸ್.