ತವರು ಕ್ಷೇತ್ರದಲ್ಲೇ ಡಾ.ಜಿ.ಪರಮೇಶ್ವರ್​ಗೆ​ ಭಾರಿ ಮುಖಭಂಗ!

Parameshwar
Published on

ತುಮಕೂರು: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​ಗೆ ತವರು ಕ್ಷೇತ್ರ ಕೊರಟಗೆರೆಯಲ್ಲಿ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.

15 ಸದ್ಯಸರ ಬಲಾಬಲ ಹೊಂದಿರುವ ಕೊರಟಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆ ನಡೆಯಿತು.

ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್​ನ 8, ಕಾಂಗ್ರೆಸ್ 5, ಬಿಜೆಪಿ 1, ಪಕ್ಷೇತರ 1 ಸದಸ್ಯರಿದ್ದಾರೆ. ಪಕ್ಷೇತರ ಮತ್ತು ಬಿಜೆಪಿ ಸದಸ್ಯರು ಜೆಡಿಎಸ್​ ಅಭ್ಯರ್ಥಿಗೆ ಜೈ ಎಂದರು. ಪರಿಣಾಮ ಪಟ್ಟಣಪಂಚಾಯಿತಿ ಅಧ್ಯಕ್ಷೆಯಾಗಿ ಜೆಡಿಎಸ್​ನ ಮಂಜುಳಾ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷೆ ಸ್ಥಾನವೂ ಜೆಡಿಎಸ್​ ಪಾಲಾಯ್ತು. ಜೆಡಿಎಸ್ ಸದಸ್ಯೆ ಭಾರತಿ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿದರು.

ಪಪಂ ಅಧ್ಯಕ್ಷ ಗಾದಿಯನ್ನು ಕೈ ವಶಕ್ಕೆ ಪಡೆಯಲು ಡಾ.ಜಿ. ಪರಮೇಶ್ವರ್‌ ತೀವ್ರ ಕಸರತ್ತು ನಡೆಸಿದ್ದರಾದರೂ ಸಿಕ್ಕಿದ್ದು ಮಾತ್ರ ಜೆಡಿಎಸ್​ನ ಓರ್ವ ಸದಸ್ಯೆಯ ಬೆಂಬಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net