

ಕುರುಗೋಡು: ಕೊರಲಗುಂದಿ ಗ್ರಾಪಂ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರಾಗಿ ವಿ.ರಾಘವರೆಡ್ಡಿ ಹಾಗೂ ಮರಿಯಮ್ಮ ಬುಧವಾರ ಅವಿರೋಧ ಆಯ್ಕೆಯಾದರು.
ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದವು. ಎರಡೂ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಯೋಗೀಶ್ವರ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ಒಟ್ಟು 18 ಜನ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಪಿಡಿಒ ಪ್ರಕಾಶ್, ಸದಸ್ಯರಾದ ವಿ.ಶಶಿಕಲಾ, ಬಿ.ಈರಮ್ಮ, ಬಿ.ಮಂಜುನಾಥ, ದಾನಪ್ಪ, ಲಕ್ಷ್ಮೀ, ಮಲ್ಲಯ್ಯ, ಸಂಪತ್ತಿ. ಸೋಮನಾಥ, ಮಲ್ಲಮ್ಮ, ಎಚ್.ರಾಮಚಂದ್ರ. ನಿಂಗಮ್ಮ, ಸಾವಿತ್ರಮ್ಮ, ಪ್ರಭಾಕರ್ ರೆಡ್ಡಿ, ಟಿ.ಮಾರೆಮ್ಮ ಮತ್ತು ವೈ.ಜಯಲಕ್ಷ್ಮೀ ಇದ್ದರು.