ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸಲ್ಲ

ಕಲಬುರಗಿ ಕೋಲಿ, ಕಬ್ಬಲಿಗ ಸಮಾಜದ ಜನರ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕೋಲಿ, ಕಬ್ಬಲಿಗ ಸಮನ್ವಯ ಸಮಿತಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ಹೇಳಿದರು.
IMG-20230930-WA0028
Published on

ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ಹೇಳಿಕೆ | ಕೋರಬಾ ಸಾವು ಪ್ರಕರಣ ತನಿಖೆಗೆ ಆಗ್ರಹ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕೋಲಿ, ಕಬ್ಬಲಿಗ ಸಮಾಜದ ಜನರ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕೋಲಿ, ಕಬ್ಬಲಿಗ ಸಮನ್ವಯ ಸಮಿತಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ಹೇಳಿದರು.
ಕಲಗುರ್ತಿಯಲ್ಲಿ ಕೋಲಿ ಸಮಾಜದ ಯುವಕ ದೇವಾನಂದ ಕೋರಬಾ ಸಾವಿಗೆ ಕಾರಣರಾದ ಆರೋಪಿ ಮತ್ತು ಕಿರುಕುಳ ನೀಡಿರುವ ಪೊಲೀಸರನ್ನು ವಜಾಗೊಳಿಸುವಂತೆ ಆಗ್ರಹಿಸಿ ಒಂದು ತಿಂಗಳಿAದ ಹೋರಾಟ ಮಾಡುತ್ತಿದ್ದು, ನಮ್ಮ ಧ್ವನಿ ಅಡಗಿಸಲು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಇಂತಹ ನೂರು ಕೇಸ್ ಹಾಕಿದರೂ ಹೋರಾಟ ನಿಲ್ಲುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಜಿ¯್ಲÁಧಿಕಾರಿ ಮತ್ತು ಜಿ¯್ಲÁ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕ್ರಮ ಕೈಗೊಂಡು, ವರದಿ ಸಲ್ಲಿಸುವಂತೆ ಸೂಚನೆ ನೀಡಿದರೂ ಇಲ್ಲಿವರೆಗೂ ಯಾವುದೇ ಕೆಲಸ ಆಗಿಲ್ಲ ಎಂದು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಿ¯್ಲÁ ಉಸ್ತುವಾರಿ ಸಚಿವರು ಆರೋಪಿಗಳನ್ನು ರP್ಷÀಣೆ ಮಾಡುತ್ತಿz್ದÁರೆ. ಸಚಿವರು ಕೀಳು ಮಟ್ಟದ ರಾಜಕೀಯ ಬಿಟ್ಟು ಕೋಲಿ ಸಮಾಜಕ್ಕೆ ನ್ಯಾಯ ಕಲ್ಪಿಸಬೇಕು. ದೇವಾನಂದ ಸಾವಿನ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ತಪ್ಪು ಮಾಡಿದ ಪೊಲೀಸರನ್ನು ವಜಾಗೊಳಿಸಬೇಕು. ಮೃತನ ಕುಟುಂಬಕ್ಕೆ ೨೫ ಲP್ಷÀ ರೂ. ಪರಿಹಾರ ಮತ್ತು ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು. ಕಲಗುರ್ತಿ ಬಾಲಕಿ ಅಪಹರಣವಾಗಿ ೮೦ ದಿನವಾದರೂ ಇನ್ನು ಪತ್ತೆಯಾಗಿಲ್ಲ. ಬಾಲಕಿ ಪತ್ತೆ ಮಾಡಿ ಕುಟುಂಬಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಬಸವರಾಜ, ಮೋಹನ ಪಾಟೀಲï, ನಿಂಗಪ್ಪ ದೇವಣಗಾಂವ್, ಗುಂಡು ಐನಾಪುರ, ಬಸವರಾಜ ಗುಂಡರಗೇರಿ, ಅಮೃತ ಡಿಗ್ಗಿ, ಸುರೇಶ ಹುಡಗಿ, ರವಿ ಡೊಂಗರಗಾAವ್, ಪ್ರೇಮ ಕೋಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net