ಹೆಬ್ಬಾವು ದಾಳಿಗೆ ಕೋತಿ ಸಾವು

ಬಸಾಪುರ ವಿಜಯನಗರ ಎಡದಂಡೆ ಕಾಲುವೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ದಡದಲ್ಲಿದ್ದ ಕೋತಿ ಮೇಲೆ ದಾಳಿ ಮಾಡಿ ಮೈಗೆ ಸುತ್ತಿಕೊಂಡಿರುವುದು.
ಬಸಾಪುರ ವಿಜಯನಗರ ಎಡದಂಡೆ ಕಾಲುವೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ದಡದಲ್ಲಿದ್ದ ಕೋತಿ ಮೇಲೆ ದಾಳಿ ಮಾಡಿ ಮೈಗೆ ಸುತ್ತಿಕೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯನಗರ ಎಡದಂಡೆ ಕಾಲುವೆಯಲ್ಲಿ ಹೆಬ್ಬಾವು
  • ಕೋತಿ ಸುತ್ತುವರಿದು ಸಾಯಿಸಿದ ಉರಗ
ಮುನಿರಾಬಾದ್: ಸಮೀಪದ ಬಸಾಪುರ ವಿಜಯನಗರ ಎಡದಂಡೆ ಕಾಲುವೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ದಡದಲ್ಲಿದ್ದ ಕೋತಿ ಮೇಲೆ ದಾಳಿ ಮಾಡಿ ಸಾಯಿಸಿದ ಘಟನೆ ಇತ್ತೀಚೆಗೆ ನಡೆದಿದೆ.
ಹೆಬ್ಬಾವು ಆಹಾರ ಅರಸಿ ಬಂದಿದ್ದ ಕೋತಿ ಮೇಲೆ ದಾಳಿ ಮಾಡಿ ಬಿಗಿಯಾಗಿ ಸುತ್ತಿಕೊಂಡಿದ್ದ ಕಾರಣ ಅದು ಉಸಿರುಗಟ್ಟಿ ಸತ್ತಿದೆ. ಈ ದೃಶ್ಯ ಕಂಡ ಕುರಿಗಾಹಿ ಮುದಿಯಪ್ಪ ಮೇಕಾಳಿ ಎಂಬುವವರು ಆತಂಕಗೊಂಡು ತನ್ನ ಸ್ನೇಹಿತರನ್ನು ಕರೆದು ತೋರಿಸಿದ್ದಾರೆ.
ನೋಡಲು ಬಂದವರು ಹೆಬ್ಬಾವು ಕೋತಿಯನ್ನು ಸುತ್ತಿಕೊಂಡಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಅವರು ತಕ್ಷಣ ಉರಗ ರಕ್ಷಕ ವಸಂತ ಕೆರಹಳ್ಳಿ ಅವರನ್ನು ಕರೆಯಿಸಿ ಹಬ್ಬಾವನ್ನು ಹಿಡಿಸಿದ್ದಾರೆ. ಇಷ್ಟರಲ್ಲಾಗಲೇ ಕೋತಿ ಪ್ರಾಣ ಬಿಟ್ಟಿತ್ತು. ಸೆರೆಯಾದ ಹೆಬ್ಬಾವನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net