ಸಿಹಿಕಹಿ ಸಿದ್ದರಾಮಯ್ಯ ಬಜೆಟ್, ಕೊಪ್ಪಳ ನಿರೀಕ್ಷಿತ ಯೋಜನೆಗಳಿಗಿಲ್ಲ ಅನುದಾನ

Siddaramaiah Budget
Published on

ಕೊಪ್ಪಳ: ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಕೆಲ ಯೋಜನೆಗಳು ೋಷಣೆಯಾಗಿವೆ. ಬಹುದಿನದ ಬೇಡಿಕೆಗಳ ಪೈಕಿ ಕೆಲವು ಈಡೇರಿದರೆ, ಇನ್ನು ಕೆಲವು ನಿರಾಸೆ ಮೂಡಿಸಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡನೆಯಾಗಲಿದೆ ಎಂಬ ನಿರೀಕ್ಷೆ, ನೀರಾವರಿಗೆ ಆದ್ಯತೆ ನೀಡದ ಕಾರಣ ಹುಸಿಯಾಗಿದೆ.

100 ಕೋಟಿ ರೂ.ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಭರವಸೆ ನೀಡಿರುವುದು ಆರೋಗ್ಯ ರಂಗ ವೃದ್ಧಿಗೆ ಸಹಕಾರಿಯಾಗಲಿದೆ. ನವಲಿ ಸಮಾನಾಂತರ ಜಲಾಶಯದ ಕನಸು ಕನಸಾಗಿಯೇ ಮುಂದುವರೆದಿದೆ. ವಿಮಾನದಲ್ಲಿ ಹಾರಾಡಬೇಕೆಂಬ ಜನರ ಕನಸು ಸರ್ಕಾರದ ಕಿವಿಗೆ ಬಿದ್ದಂತಿಲ್ಲ. ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಅಂಜನಾದ್ರಿ ಬೆಟ್ಟ, ಹುಲಿಗೆಮ್ಮ ದೇವಾಲಯ ಅಭಿವೃದ್ಧಿಗೂ ಆದ್ಯತೆ ದೊರೆತಿಲ್ಲ. ಕಲಬುರಗಿ ಸಂಪುಟದಲ್ಲಿ ಅನುಮೋದಿಸಿದ ಕಾಮಗಾರಿಗಳನ್ನೇ ಮುಂದುವರಿಸುವ ಭರವಸೆ ನೀಡಿದೆ. ಉಳಿದಂತೆ ವಿವಿಧ ಯೋಜನೆಗಳಡಿ ಜಿಲ್ಲೆಯ ಪಾಲು ಸಿಗಲಿದ್ದು, ಬಜೆಟ್ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಜನರ ಅಭಿಪ್ರಾಯಗಳು ಇಂತಿವೆ.

ಹೊಸತನವಿಲ್ಲದ ಮುಂಗಡಪತ್ರ ಒಟ್ಟಾರೆ ಇದೊಂದು ನಿರಾಶಾದಾಯಕ ಬಜೆಟ್. ಹೊಸತನವಿಲ್ಲದ ಬಜೆಟ್. ನೀರಾವರಿ, ತೋಟಗಾರಿಕೆ, ಕೃಷಿ ಬಗ್ಗೆ ಹೊಸ ಯೋಜನೆಗಳಿಲ್ಲ. ಕಕ ಭಾಗಕ್ಕೆ ಪ್ರತ್ಯೇಕ ಅನುದಾನ ನೀಡುವುದಾಗಿ ಹೇಳಿ, ಅದರಲ್ಲೇ ಕೆಲ ಯೋಜನೆಗಳನ್ನು ತೋರಿಸಿ ಯಾಮಾರಿಸಿದ್ದಾರೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಯಾವುದೇ ಕೊಡುಗೆ ಇಲ್ಲ. ನವಲಿ ಸಮಾನಾಂತರ ಜಲಾಶಯ ಮಾತುಕತೆ ಮಾಡುವುದಾಗಿ ಹಲವು ವರ್ಷಗಳಿಂದ ಹೇಳುತ್ತಿದ್ದಾರೆ. ಕಾರ್ಯರೂಪಕ್ಕೆ ತರುವುದು ಯಾವಾಗ ಎಂಬುದು ಪ್ರಶ್ನೆ. | ನಜೀರಸಾಬ್ ಮೂಲಿಮನಿ, ರಾಜ್ಯ ರೈತ ಸಂಘ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕುಷ್ಟಗಿ. ವೃತ್ತಿ ತೆರಿಗೆ ಹೆಚ್ಚಳ ಬಜೆಟ್‌ನಲ್ಲಿ ಹೊಸದಾಗಿ ಯಾವುದೇ ಹೇಳಿಕೊಳ್ಳುವಂಥ ಅಂಶಗಳಿಲ್ಲ. ಹಳೆಯ ಯೋಜನೆಗಳನ್ನು ಮುಂದುವರೆಸಿದ್ದಾರೆ. ವೃತ್ತಿ ತೆರಿಗೆ ಹೆಚ್ಚಳ ಮಾಡಿದ್ದು, ಪ್ರತಿ ತಿಂಗಳು 100 ರೂ. ಹೆಚ್ಚುವರಿ ಹೊರೆಯಾಗಲಿದೆ. ಜಿಎಸ್‌ಟಿ ನಿಯಂತ್ರಣ ರಾಜ್ಯದ ಕೈಯಲ್ಲಿ ಇಲ್ಲ. ಅಭಿವೃದ್ಧಿಗೆ ಪೂರಕ ಅಂಶಗಳು ಕಡಿಮೆ ಇವೆ. ಔದ್ಯೋಗಿಕ ವಿಷಯಗಳನ್ನು ಪ್ರಸ್ತಾಪಿಸಿಲ್ಲ. | ಚಂದ್ರಕಾಂತ ತಾಲೇಡಾ, ಲೆಕ್ಕ ಪರಿಶೋಧಕ ಕೊಪ್ಪಳ ಸಾಲ ಹೆಚ್ಚಾಗಿ ಅಭಿವೃದ್ಧಿಗೆ ಹಿನ್ನಡೆ ಒಟ್ಟಾರೆ ಯಾವುದೇ ವಿಶೇಷವಿಲ್ಲ. ಸಾಲ ಹೆಚ್ಚಾಗಿದೆ. ರಾಜ್ಯದ ಅಭಿವೃದ್ಧಿಗೆ ಹೊಡೆತ ಬೀಳಲಿದೆ. ಸಮಾನಾಂತರ ಜಲಾಶಯದ ಬಗ್ಗೆ ಪ್ರಸ್ತಾಪಿಸದಿರುವುದು ಬೇಸರ ತರಿಸಿದೆ. ಬಹುದಿನದ ಬೇಡಿಕೆಯಾಗಿದ್ದ ಕೊಪ್ಪಳ ಜಿಲ್ಲಾ ನ್ಯಾಯಾಲಯ ಕಟ್ಟಡ ಕಾಮಗಾರಿಗೆ 50 ಕೋಟಿ ರೂ. ನೀಡಿದ್ದು ಸಂತಸ ತಂದಿದೆ. ಉಳಿದಂತೆ ಇತರ ಎಲ್ಲ ಅಂಶಗಳನ್ನು ಕಡೆಗಣಿಸಿರುವುದು ಸರಿಯಲ್ಲ. ಇದರಿಂದ ಅಭಿವೃದ್ಧಿ ನಿರೀಕ್ಷಿಸಲಾಗದು. | ಸುರೇಶ ಭೂಮರಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೊಪ್ಪಳ ಸರ್ವರಿಗೂ ಸಮಪಾಲು ಸರ್ವರಿಗೂ ಸಮಪಾಲು ನೀಡಿದ ಬಜೆಟ್. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ವಸತಿ ಸಹಿತ ತರಬೇತಿ ಸಿಗಲಿ. ಕೈಗಾರಿಕೆ ನಿವೇಶನ ಖರೀದಿಯಲ್ಲಿ ಮೀಸಲು, ಅಲೆಮಾರಿಗಳ ಕಾಲನಿ ಸಮಗ್ರ ಅಭಿವೃದ್ಧಿ, 12 ಸಾವಿರ ಕೃಷಿ ಹೊಂಡ ನಿರ್ವಾಣ, ತೊಗರಿ ಉತ್ಪಾದನೆ ಉತ್ತೇಜನಕ್ಕೆ ನೆರವು, ಹೈನುಗಾರಿಕೆ, ಸವಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗ್ರಾಮೀಣಾಭಿವದ್ಧಿ, ಮೂಲಸೌಲಭ್ಯ, ಕೈಗಾರಿಕೆ, ಶಿಕ್ಷಣ, ಮಹಿಳಾ ಸಬಲೀಕರಣ ಸೇರಿದಂತೆ ಎಲ್ಲ ಇಲಾಖೆಗಳಿಗೆ ಆದ್ಯತೆ ನೀಡಲಾಗಿದೆ. ಇದೊಂದು ಜನಪರ ಬಜೆಟ್. | ಶಿವರಾಜ ತಂಗಡಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಕಕ ಭಾಗಕ್ಕೆ ಸಿಕ್ಕಿಲ್ಲ ಆದ್ಯತೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಅತಿಥಿ ಶಿಕ್ಷಕರಿಗೆ ವಾಸಿಕ ಗೌರವಧನ ತಲಾ 2 ಸಾವಿರ ಏರಿಕೆ ವಾಡಲಾಗಿದೆ. ಪ್ರವರ್ಗ-1 ಪ್ರವರ್ಗ-2 ಹಾಗೂ 2ಬಿ ಶೇ.20 ಮೀಸಲಾತಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ನೂರು ನಾಡ ಕಚೇರಿ ನಿರ್ವಾಣದಿಂದ ಅನುಕೂಲವಾಗಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರೀಕ್ಷೆಯಂತೆ ಬಜೆಟ್ ಮಂಡನೆ ಆಗಿಲ್ಲ. ಹಾಗಾಗಿ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. | ಜೆ.ಎಸ್.ವಾಲಿಪಾಟೀಲ್, ವಿದ್ಯಾರ್ಥಿನಿ, ಚಿಕ್ಕಮನ್ನಾಪುರ ಶಿಕ್ಷಣ ವಿರೋಧಿ ಬಜೆಟ್ ಬಜೆಟ್ ವಿದ್ಯಾರ್ಥಿ, ಯುವಜನರ ನಿರೀಕ್ಷೆಯನ್ನು ಹುಸಿವಾಡಿದೆ. ಕೊಠಾರಿ ಆಯೋಗ ವರದಿ ಶಿಫಾರಸ್ಸಿನ ಪ್ರಕಾರ ಬಜೆಟ್‌ನಲ್ಲಿ ಶೇ.30 ಶಿಕ್ಷಣ ರಂಗಕ್ಕೆ ಮೀಸಲಿಡಬೇಕು. ಆದರೆ, ಪ್ರಸಕ್ತ ಬಜೆಟ್‌ನಲ್ಲಿ ಶೇ.10 (45,286 ಕೋಟಿ ರೂ. ) ನೀಡಿದ್ದಾರೆ. ಈ ಮೂಲಕ ಶಿಕ್ಷಣ ವಿರೋಧಿ ಬಜೆಟ್ ಮಂಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ಸಂಶೋಧನೆಗೂ ಅನುದಾನ ನೀಡದಿರುವುದು ಸರಿಯಲ್ಲ. | ಗ್ಯಾನೇಶ ಕಡಗದ, ಎಸ್‌ಎ್ಐ ಜಿಲ್ಲಾಧ್ಯಕ್ಷ ತೋರಿಕೆಯ ಬಜೆಟ್ ಬಜೆಟ್‌ನಲ್ಲಿ ಕೊಪ್ಪಳಕ್ಕೆ ಏನು ಸಿಕ್ಕಿದೆ ಎಂದು ಕನ್ನಡಕ ಹಾಕಿ ಹುಡುಕಬೇಕಿದೆ. ಇಲ್ಲಿನ ಶಾಸಕರು, ಸಚಿವರು ಹಾಗೂ ಆರ್ಥಿಕ ಸಲಹೆಗಾರರು ಏನು ವಾಡುತ್ತಿದ್ದರೆಂದು ಕೇಳುವ ಪರಿಸ್ಥಿತಿ ನಿರ್ವಾಣವಾಗಿದೆ. ಕೊಪ್ಪಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಮತದಾರರು ತಮಗೆ ತಾವೇ ಶಾಪ ಹಾಕಿಕೊಳ್ಳುತ್ತಾ ಧೂಳಿನಲ್ಲಿ, ಗುಂಡಿ ಬಿದ್ದ ರಸ್ತೆಯಲ್ಲಿ, ಕನಿಷ್ಠ ಸೌಲಭ್ಯಗಳು ಇಲ್ಲದ ವ್ಯವಸ್ಥೆಯಲ್ಲಿ ಬದುಕುವಂತಾಗಿದೆ. ಇದು ಹಾರಿಕೆಯ, ತೋರಿಕೆಯ ಬಜೆಟ್. | ಸಿ.ವಿ.ಚಂದ್ರಶೇಖರ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಜನಪರವಾಗಿದೆ. ಎಲ್ಲ ವರ್ಗದವರಿಗೂ ಆದ್ಯತೆ ನೀಡಿದ್ದಾರೆ. ಕಾರ್ಮಿಕ ಹಿತ ಕಾಪಾಡಿದ್ದು, ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಜನಮೆಚ್ಚುವ ಬಜೆಟ್ ಇದಾಗಿದ್ದು, ಎಲ್ಲರ ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲ ರಂಗಗಳಿಗೂ ಸಮಾನ ಆದ್ಯತೆ ನೀಡಲಾಗಿದೆ. | ಮನೋಹರ ಸ್ವಾಮಿ ಹಿರೇಮಠ, ವಿಪಕ್ಷನಾಯಕ, ನಗರಸಭೆ ಗಂಗಾವತಿ ಅಭಿವೃದ್ಧಿಗೆ ಪೂರಕ ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದೆ. ರೈತರಿಗೆ ಕೃಷಿ ಹೊಂಡ ಸೇರಿ ಇತರ ಯೋಜನೆಗಳನ್ನು ಮುಂದುವರೆಸಲಾಗಿದೆ. ಶಿಕ್ಷಣ, ನೀರಾವರಿ, ಕೃಷಿ, ಆರೋಗ್ಯ, ತೋಟಗಾರಿಕೆ ಸೇರಿ ಎಲ್ಲ ವಲಯಗಳಿಗೆ ಮನ್ನಣೆ ನೀಡಲು ಯತ್ನಿಸಿದ್ದಾರೆ. ಅಗತ್ಯ ಅನುದಾನ ೋಷಿಸಿದ್ದು ಅಭಿವೃದ್ಧಿಗೆ ಪೂರಕವಾಗಿದೆ. | ಶಂಕರಪ್ಪ ಕರಡಿ, ಎಸ್ಡಿಎಂಸಿ ಅಧ್ಯಕ್ಷ ಅಳವಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net