ಕೂಟ ಮಹಾಜಗತ್ತು ಮಹಿಳಾ ವೇದಿಕೆ ಸಭೆ

mahila
ಸಾಲಿಗ್ರಾಮ ಕೂಟ ಮಹಾಜಗತ್ತು ಮಹಿಳಾ ವೇದಿಕೆಯ ವಾರ್ಷಿಕ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕೋಟ

ಸಾಲಿಗ್ರಾಮ ಕೂಟ ಮಹಾಜಗತ್ತು ಮಹಿಳಾ ವೇದಿಕೆ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಗುರುನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು. ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್ ಕಾರಂತ ಶುಭಾಶಂಸನೆಗೈದರು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದಾ ಸಿ. ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಶಕ್ತ ಮಹಿಳೆಯರಿಗೆ ನೆರವು ನೀಡಲಾಯಿತು. ಶಿಕ್ಷಕಿ ಸುವರ್ಣ ಜೆ.ನಾವಡ, ಕೂಟ ಮಹಾ ಜಗತ್ತು ಅಧ್ಯಕ್ಷ ಎ. ಶ್ರೀಪತಿ ಅಧಿಕಾರಿ ಉಪಸ್ಥಿತರಿದ್ದರು. ರೇವತಿ ಐತಾಳ ಸ್ವಾಗತಿಸಿದರು. ಶಿವಪ್ರಭ ಆಲ್ಸೆ ವರದಿ ವಾಚಿಸಿದರು. ವಿಜಯಲಕ್ಷ್ಮೀ ತುಂಗ ವಂದಿಸಿದರು. ಪೂರ್ಣಿಮಾ ಅಧಿಕಾರಿ ನಿರೂಪಿಸಿದರು.

ಹಲವರಿಗೆ ಗೌರವಾರ್ಪಣೆ

ಸಾಧಕಿಯರಾದ ಡಾ.ಚಂದನಾ ಎಸ್. ಐತಾಳ ಮತ್ತು ಅಂಗನವಾಡಿ ನಿವೃತ್ತ ಶಿಕ್ಷಕಿ ಲಕ್ಷ್ಮೀ ಉರಾಳ ಅವರನ್ನು ಸನ್ಮಾನಿಸಲಾಯಿತು. ನಾಟಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರಾಂಕ್ ಪಡೆದ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಸೋಮಯಾಜಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರಾಂಕ್ ಪಡೆದ ಶ್ರೀಪ್ರಿಯಾ ಅಡಿಗ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net