'ಕೊನೆಯ ಬಿಳಿ ಬೇಟೆಗಾರ' ಕೃತಿ ಲೋಕಾರ್ಪಣೆ

Book
Published on

ಬೆಂಗಳೂರು: ನಗರೀಕರಣದ ಪ್ರಭಾವದಿಂದ ಕಾಡು ಮತ್ತು ಅಲ್ಲಿನ ಜೀವಸಂಕುಲ ನಾಶವಾಗಿದ್ದರಿಂದ, ಹಿಂದಿನ ದಿನಗಳಲ್ಲಿ ವನ್ಯಜಿವಿಗಳ ಬೇಟೆ ಬಗ್ಗೆ ಪ್ರಸ್ತುತ ತಲೆಮಾರಿನವರಿಗೆ ಹೆಚ್ಚಿನ ಅರಿವಿಲ್ಲ ಎಂದು ಸಿಡಬ್ಲುಎ ಸೈನ್ಸ್​ ಏಷಿಯಾದ ನಿರ್ದೇಶಕ ಡಾ.ಉಲ್ಲಾಸ್​ ಕಾರಂತ್​ ಹೇಳಿದ್ದಾರೆ.

ಆಕೃತಿ ಪುಸ್ತಕದ ವತಿಯಿಂದ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಲ್​.ಜಿ. ಮೀರಾ ಅವರ ಡೊನಾಲ್ಡ್​ ಆ್ಯಂಡರ್ಸನ್​ ನೆನಪುಗಳ ಆಧಾರಿತ ಕನ್ನಡ ಅನುವಾದಿತ ಕೃತಿ 'ಕೊನೆಯ ಬಿಳಿ ಬೇಟೆಗಾರ' (ಮೂಲ: ಲೇಖಕ ಜೋಷುವಾ ಮ್ಯಾಥ್ಯೂ) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಸ್ವಾತಂತ್ರ ನಂತರದಲ್ಲಿ ಬಿಳಿ ಬೇಟೆಗಾರರ (ಬ್ರಿಟಿಷರ) ಸಂಸತಿಯನ್ನು "ಕೊನೆಯ ಬಿಳಿ ಬೇಟೆಗಾರ' ಕೃತಿಯಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಶಿಕಾರಿಗೆ ಹೋಗುತ್ತಿದ್ದವರ ಅಲ್ಪ ಸ್ವಲ್ಪ ಕಥೆಗಳು, ವೈಜ್ಞಾನಿಕವಲ್ಲದ ಕೆಲವೊಂದು ಕಥೆಗಳನ್ನು ಬಿಟ್ಟರೆ ಕನ್ನಡದಲ್ಲಿ ವನ್ಯಜಿವಿ ಸಾಹಿತ್ಯದ ಸಂಖ್ಯೆ ಕಡಿಮೆಯಿದೆ. ಆದರೆ ಬ್ರಿಟಿಷರು ವನ್ಯಜಿವಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net