ಸಂಭ್ರಮದ ಕೊಳ್ಳಿ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ

IMG20240430133816
Published on

ಸಾಲಿಗ್ರಾಮ: ತಾಲೂಕಿನ ಚನ್ನಂಗೆರೆ ಗ್ರಾಮದಲ್ಲಿ ಶ್ರೀ ಕೊಳ್ಳಿ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಜರುಗಿತು.


ಮಧ್ಯಾಹ್ನ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಗಂದು ರಥಕ್ಕೆ ಪ್ರತಿಷ್ಠಾಪನೆ ಮಾಡಲಾಯಿತು. ಅರ್ಚಕರಾದ ಸಿ.ಕೆ.ಮಲ್ಲಿಕಾರ್ಜುನ, ಸಿ.ಪಿ.ರಾಮಪ್ಪ, ಚಿಂದಬರ್ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರು ತೇರು ಎಳೆದರು. ಭಕ್ತರು ಹಣ್ಣು- ದವನ ಎಸೆದರು. ನವ ದಂಪತಿ ರಥಕ್ಕೆ ಪೂಜೆ ಸಲ್ಲಿಸಿದರು. ರಥೋತ್ಸವದ ಹಿನ್ನೆಲೆಯಲ್ಲಿ ತಿಂಡಿ-ತಿನಿಸು, ಆಟಿಕೆಗಳ ಅಂಗಡಿಗಳನ್ನು ತೆರೆಯಲಾಗಿತ್ತು. ಹಾಸನ, ಮಂಡ್ಯ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಭಕ್ತರಿಗೆ ಮಜ್ಜಿಗೆ-ಪಾನಕ ವಿತರಿಸಲಾಯಿತು.


ಮುಖಂಡರಾದ ಸಿ.ಬಿ.ಮಲ್ಲಿಕಾರ್ಜುನ, ಸಿ.ಕೆ.ಜಗದೀಶ್, ರಾಮೇಗೌಡ, ಶಂಕರೇಗೌಡ, ಗಂಗಾಧರ, ೋರೆಗೌಡ, ಸಿ.ಜಿ.ತಮ್ಮೇಗೌಡ, ಪುಟ್ಟರಾಜು, ರಾಮಶೆಟ್ಟಿ, ನಂಜುಂಡಶೆಟ್ಟಿ, ಸ್ವಾಮಿನಾಯ್ಕ, ರಾಮನಾಯ್ಕ, ನಂಜುಂಡಶೆಟ್ಟಿ, ಬಸವರಾಜು, ರಮೇಶ್ ಜೋಗಿ, ಶಂಕರ್ ನಾಯ್ಕ, ಮಲ್ಲಿಕಾರ್ಜುನ್, ಮಲ್ಲೇಶಾಚಾರ್, ಕಾಳಯ್ಯ, ಕರಿಯಯ್ಯ, ಲಕ್ಕಯ್ಯ, ನಿಂಗಯ್ಯ, ಮಲ್ಲೇಶ್, ಗವೀಗೌಡ, ತಮ್ಮಯ್ಯ ಶೆಟ್ಟಿ, ಸಿಆರ್‌ಪಿ ಪ್ರಭು, ಮಂಜುನಾಥ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net