ಪ್ರತಿ ಮನೆಗೂ ಉಚಿತ ವಿದ್ಯುತ್ ಶಾಸಕ ಕೋಳಿವಾಡ ಭರವಸೆ

RNR KOLIWAD
Published on

ರಾಣೆಬೆನ್ನೂರ: ಸರ್ಕಾರದ ಉಚಿತ ಯೋಜನೆಗಳ ಪ್ರಯೋಜನ ಪಡೆಯಲು ಪ್ರತಿಯೊಬ್ಬರೂ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಬೇಕಾಗಿರುವುದರಿಂದ ಎಲ್ಲ ಗ್ರಾಪಂಗಳಲ್ಲಿ ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗಿದೆ.

ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.


ತಾಲೂಕಿನ ಕರೂರ ಗ್ರಾಮದಲ್ಲಿ ಶುಕ್ರವಾರ ಗೃಹಜ್ಯೋತಿ ಕಾರ್ಯಕ್ರಮದ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆಯನ್ನು ರಾಜ್ಯಾದ್ಯಂತ ಮಾಡುತ್ತಿರುವುದರಿಂದ ಪ್ರಾರಂಭದಲ್ಲಿ ಸ್ವಲ್ಪ ಅಡಚಣೆಯಾಗುತ್ತದೆ.

ಯೋಜನೆ ಜಾರಿ ನಂತರ ಪ್ರತಿಯೊಂದು ಮನೆಗೂ ವಿದ್ಯುತ್ ಉಚಿತವಾಗಲಿದೆ. ಈಗಾಗಲೇ ಶಕ್ತಿ ಯೋಜನೆಯಲ್ಲಿ 1.5 ಕೋಟಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಪ್ರತಿ ದಿನ 6 ಕೋಟಿ ರೂ. ಗೂ ಹೆಚ್ಚು ಟಿಕೆಟ್ ಹಣ ಸರ್ಕಾರ ನೀಡುತ್ತಿದೆ ಎಂದರು.


ಮಹಿಳೆಯರು ಪುರುಷರಿಗಿಂತ ಏನು ಕಡಿಮೆಯಿಲ್ಲ ಎಂದು ಸಾಬೀತುಪಡಿಸಲು ಹಾಗೂ ಸರ್ಕಾರ ಮಹಿಳೆಯರ ಪರವಾಗಿ ಇದೆ ಎಂದು ತೋರಿಸಿ ಕೊಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ನಿರುದ್ಯೋಗ ನಿರ್ಮೂಲನೆ ಸಲುವಾಗಿ ಯುವನಿಧಿ ಯೋಜನೆ, ಗೃಹಲಕ್ಷ್ಮೀ ಯೋಜನೆ ಜಾರಿಗೆಗೊಳಿಸಿದೆ ಎಂದರು.


ಗ್ರಾಪಂ ಅಧ್ಯಕ್ಷೆ ನೀಲಮ್ಮ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಚೋಳಪ್ಪ ಕಚ್ಚರಬಿ, ಹನುಮಂತಪ್ಪ ಲಮಾಣಿ, ಗೌರಮ್ಮ ಸಣ್ಣಬೊಮ್ಮಾಜಿ, ವಾಣಿಶ್ರೀ ಲೆಕ್ಕಿಕೋನಿ, ದೇವೇಂದ್ರಪ್ಪ, ಮುಖ್ಯ ಶಿಕ್ಷಕ ವಿ.ವಿ. ಮಣ್ಣಬಸಣ್ಣನವರ, ಪಿಡಿಒ ಜ್ಯೋತಿ ಕಮ್ಮಾರ, ದೈಹಿಕ ಶಿಕ್ಷಣ ಶಿಕ್ಷಕ ಕೇಶವ ಬಾರ್ಕಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net