ಕೊರಬಾ ಸಾವು ಪ್ರಕರಣ ಧರಣಿ 25ರಂದು

avanna mayakeri
Published on

ಕಲಬುರಗಿ: ಕಾಳಗಿ ತಾಲೂಕಿನ ಕಲಗುರ್ತಿ ಗ್ರಾಮದ ದೇವಾನಂದ ಕೋರಬಾ ಸಾವಿಗೆ ಕಾರಣರಾದವರನ್ನು ಬಂಧಿಸುವAತೆ ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಕೋಲಿ ಸಮಾಜ ಸಮನ್ವಯ ಸಮಿತಿ ಸಂಚಾಲಕರಾದ ಅವ್ವಣ್ಣ ಮ್ಯಾಕೇರಿ ಹಾಗೂ ಶರಣಪ್ಪ ತಳವಾರ ತಿಳಿಸಿದರು.

ಘಟನೆ ನಡೆದು ೬೫ ದಿನಗಳಾದರೂ ಆರೋಪಿಗಳನ್ನು ಬಂಧಿಸದ ಕಾಳಗಿ ಸಿಪಿಐ, ಮಾಡಬೂಳ ಪಿಎಸ್‌ಐ, ಮುಖ್ಯ ಪೇದೆ ಮತ್ತು ಇಬ್ಬರು ಪೇದೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಭಾನುವಾರ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ದೇವಾನಂದ ಕುಟುಂಬಕ್ಕೆ ಸರ್ಕಾರದಿಂದ ೨೫ ಲಕ್ಷ ರೂ. ಪರಿಹಾರ ಘೋಷಿಸಬೇಕು. ನೊಂದಿರುವ ಕುಟುಂಬದವರಿಗೆ ಜೀವ ಬೆದರಿಕೆ ಇರುವುದಿರಿಂದ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಬಸವರಾಜ ಬೂದಿಹಾಳ, ರಮೇಶ ನಾಟಿಕಾರ, ಬಸವರಾಜ ಹರವಾಳ, ಸಂತೋಷ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net