ವೇತನ ಸಿಗದೆ ಹತಾಶರಾದ ನೌಕರರಿಂದ ಕಲ್ಲುತೂರಾಟ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್​

KOLARA Narasapura wistron attack by its own employess
Published on

ಕೋಲಾರ : ಕರೊನಾ ಸಂಕಷ್ಟಕ್ಕೆ ಜಗತ್ತೇ ತಲ್ಲಣಗೊಂಡಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಹಲವು ಉದ್ಯೋಗದಾತರೂ ಸಂಕಷ್ಟಕ್ಕೀಡಾಗಿದ್ದಾರೆ. ಇವುಗಳ ನಡುವೆ, ಕೆಲಸ ಮಾಡಿಸಿಕೊಂಡು ನಾಲ್ಕು ತಿಂಗಳಿಂದ ವೇತನ ನೀಡದೇ ಇದ್ದ ಕಾರಣ ಹತಾಶರಾಗಿದ್ದ ನೌಕರರು ಇಂದು ಕಂಪನಿಯ ಕಚೇರಿ ಮೇಲೆ ದಾಂಧಲೆ ನಡೆಸಿ, ಕಲ್ಲು ತೂರಾಟ, ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದ್ದಾರೆ.

ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟಾನ್ ಕಂಪನಿಯ ಮೇಲೆ ಕಲ್ಲು ತೂರಾಟ ನಡೆದಿರುವಂಥದ್ದು. ನಾಲ್ಕು ತಿಂಗಳ ನಿಂದ ವೇತನವನ್ನು ನೀಡಿಲ್ಲ ಎಂಬ ಆರೋಪ ನೌಕರರದ್ದು. ಆಕ್ರೋಶಗೊಂಡ ಕಾರ್ಮಿಕರು ಇಂದು ಕಂಪನಿಯ ಗಾಜು ಮತ್ತು ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ವಾಹನಗಳನ್ನು ಮಗುಚಿ ಹಾಕಿದ್ದು, ಕೆಲವಕ್ಕೆ ಬೆಂಕಿ ಕೂಡ ಹಚ್ಚಿದ್ದಾರೆ.

ಸುಮಾರು 11,000 ಕಾರ್ಮಿಕರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿಯ ಪಾಳಿಗೆ ಬಂದಂತಹ ಸಾವಿರಾರು ಕಾರ್ಮಿಕರು ಈ ಕೃತ್ಯವೆಸಗಿದ್ದು, ಕಂಪನಿಯ ಗಾಜಿನ ಆವರಣಗಳನ್ನು ಒಡೆದು ಹಾಕಿದ್ದಲ್ಲದೆ ಕಂಪನಿಯಲ್ಲಿದ್ದ ಬೆಲೆಬಾಳುವ ಲ್ಯಾಪ್ ಟಾಪ್, ಐಪೋನ್ ಪೋನ್ ಗಳನ್ನು ತೆಗೆದುಕೊಂಡು‌ ಹೋಗಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಪರಿಸ್ಥಿತಿ ಕೈ ಮೀರಿದ ಕಾರಣ ಸ್ಥಳಕ್ಕಾಗಮಿಸಿದ ವೇಮಗಲ್ ಪೊಲೀಸ್ ಠಾಣೆಯ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ನೌಕರರನ್ನು ಅಲ್ಲಿಂದ ಚದುರಿಸಿದ್ದಾರೆ. ಆದಾಗ್ಯೂ, ಪೊಲೀಸರ ಕಣ್ತಪ್ಪಿಸಿ ಕಂಪನಿಯ ಆಸ್ತಿಪಾಸ್ತಿಗೆ ಹಾನಿ ಎಸಗಲು ನೌಕರರು ಪ್ರಯತ್ನಿಸಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

KOLARA Narasapura wistron attack by its own employess 8
KOLARA Narasapura wistron attack by its own employess 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net