ಮಿಸ್ ಟೀನ್ ಇಂಡಿಯಾದ ತೇಜಶ್ರೀಗೆ ಜಯ |Winner

ಮುಂದಿನ ವರ್ಷ ಇಂಡೋನೇಷ್ಯಾದಲ್ಲಿ ನಿಗದಿಯಾಗಿರುವ ‘ಮಿಸ್ ಪ್ರೀ-ಟೀನ್ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್’ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಕೋಲಾರ ಜಿಲ್ಲೆಗೆ ಹಿರಿಮೆ ತಂದುಕೊಟ್ಟ ಹೊಸಹುಡ್ಯ ಯುವತಿ.
Victory for Miss Teen India Tejashree
ತೇಜಶ್ರೀ ಮಿಸ್ ಟೀನ್ ಇಂಡಿಯಾ ವಿಜೇತೆVictory for Miss Teen India Tejashree
Published on: 

ಕೋಲಾರ: ಗ್ರಾಮೀಣ ಪ್ರತಿಭೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೂ ಬೆಳೆಯಬಹುದು ಎಂಬುದನ್ನು ಚಿನ್ನದ ನಾಡಿನ ಮಣ್ಣಿನ ಮಗಳು ಸಾಬೀತುಪಡಿಸಿದ್ದಾಳೆ. ಸೋಮವಾರ ನವದೆಹಲಿಯಲ್ಲಿ ಆಯೋಜಿಸಿದ್ದ ಪ್ರೈಡ್ ಆಫ್ ಇಂಡಿಯಾ - ಮಿಸ್ ಟೀನ್ ಇಂಡಿಯಾ-2026 ಸ್ಪರ್ಧೆಯಲ್ಲಿ ಶ್ರೀನಿವಾಸಪುರ ತಾಲೂಕು ಹೊಸಹುಡ್ಯ ಗ್ರಾಮದ ತೇಜಶ್ರೀ ವಿಜೇತಳಾಗಿ ಮುಂದಿನ ವರ್ಷ ಇಂಡೋನೇಷ್ಯಾದಲ್ಲಿ ನಿಗದಿಯಾಗಿರುವ ‘ಮಿಸ್ ಪ್ರೀ-ಟೀನ್ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್’ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಹಿರಿಮೆ ತಂದುಕೊಟ್ಟಿದ್ದಾರೆ.

ಹೊಸಹುಡ್ಯ ಗ್ರಾಮದ ರೈತ ಕುಟುಂಬದ ಹರಿನಾಥ್ ಮತ್ತು ರೂಪಾ ದಂಪತಿ ಪುತ್ರಿ ತೇಜಶ್ರೀ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಮಿಸ್ ಟೀನ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತಳಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.

ಪ್ರೈಡ್ ಆಫ್ ಇಂಡಿಯಾ-ಮಿಸ್ ಟೀನ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತಳಾಗುತ್ತಿದ್ದಂತೆ ‘ಡಿಕೆ ಪೇಜೆಂಟ್ 2026’ರ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net