

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವತಿಯಿಂದ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ ಕೊಗ್ಗ ದೇವಣ್ಣ ಕಾಮತ್ ಸ್ಮರಣಾರ್ಥ ನೀಡುವ 2024-25ನೇ ಸಾಲಿನ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿಗೆ ಜಾದೂ ಕಲಾವಿದ ಓಂ ಗಣೇಶ್ ಉಪ್ಪುಂದ ಆಯ್ಕೆಯಾಗಿದ್ದಾರೆ. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಮನೆಯಲ್ಲಿ ಜ.19ರಂದು ನಡೆಯಲಿರುವ ಹತ್ತನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು. ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಪತ್ರಕರ್ತ, ವಾಗ್ಮಿಯಾಗಿ ಕಾರ್ಯನಿರ್ವಹಿಸಿದ್ದಾರೆ.