ಕೊಡ್ಸುಳು ಹಿರಿಯ ಪ್ರಾಥಮಿಕ ಶಾಲೆಗೆ ಲಕ್ಷ ರೂ. ಬಹುಮಾನ

28bkl2
Published on

ಭಟ್ಕಳ: ತಾಲೂಕಿನ ಮುರ್ಡೆಶ್ವರದ ಕೊಡ್ಸುಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾಭಿವೃದ್ಧಿ ಮಂಡಳಿಯು 2023-24ನೇ ಸಾಲಿನಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಎಸ್​ಡಿಎಂಸಿ ಎಂದು ಆಯ್ಕೆಗೊಂಡು ಶಿಕ್ಷಣ ಇಲಾಖೆಯಿಂದ ಒಂದು ಲಕ್ಷ ರೂ. ಬಹುಮಾನ ಪಡೆದುಕೊಂಡಿದೆ.

2023-24ನೇ ಸಾಲಿನಲ್ಲಿ ಈ ಶಾಲೆಯ ಶಾಲಾಭಿವೃದ್ಧಿ ಸಮಿತಿಯು ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ದಾನಿಗಳ ನೆರವಿನೊಂದಿಗೆ ಈ ಶಾಲೆಯ ಮೇಲ್ಛಾವಣೆ, ಸುಣ್ಣ-ಬಣ್ಣ, ವಿದ್ಯಾರ್ಥಿಗಳ ಕಲಿಕೆಗೆ ಲ್ಯಾಪ್​ಟಾಪ್, ಪ್ರೋಜೆಕ್ಟರ, ಸೌಂಡ್ ಸಿಸ್ಟಮ್ ಕುಡಿಯವ ನೀರಿನ ಸೌಲಭ್ಯ ಸೇರಿ ಹಲವು ಅಬಿವೃದ್ಧಿ ಕಾರ್ಯ ಕೈಗೊಂಡಿದ್ದರು. ಇದನ್ನೆಲ್ಲಾ ಪರಿಗಣಿಸಿ, ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದೆ. ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಶಾಲಾಭಿವೃದ್ಧಿ ಸಮಿತಿಯವರಿಗೆ ಊರ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net