ಕೋಡಿ ಸಂಜೀವಿನಿ ಒಕ್ಕೂಟ ಮಹಾಸಭೆ, ನೂತನ ಅಧ್ಯಕ್ಷರ ಆಯ್ಕೆ

kota (1)
Published on

ಕೋಟ: ಕೋಡಿ ಗ್ರಾಪಂನ ಸಮನ್ವಯ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಇತ್ತೀಚಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಮನ್ವಯ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ದೀಪಾ ಆರ್.ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿ ಕಾರ್ಯಕ್ರಮ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಪೂರ್ಣಿಮಾ, ಉಪಾಧ್ಯಕ್ಷರಾಗಿ ಸುಶ್ಮಿತಾ, ಕಾರ್ಯದರ್ಶಿಯಾಗಿ ಸುಮತಿ, ಜತೆ ಕಾರ್ಯದರ್ಶಿಯಾಗಿ ಪ್ರೇಮಾ ಖಾರ್ವಿ, ಕೋಶಾಧಿಕಾರಿಯಾಗಿ ಜ್ಯೋತಿ ಆಯ್ಕೆಗೊಂಡರು.

ಕೋಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಗ್ರಾಪಂ ಸದಸ್ಯರಾದ ಪ್ರಭಾಕರ್ ಮೆಂಡನ್, ಬ್ರಹ್ಮಾವರ ಘಟಕ ಎನ್ ಆರ್‌ಎಲ್‌ಎಂ ವಲಯ ಮೇಲ್ವಿಚಾರಕಿ ಸ್ವಾತಿ ಕುಮಾರಿ, ಎನ್‌ಆರ್‌ಎಲ್‌ಎಂ ಬಿಆರ್‌ಪಿ ರೀತಾ ಕೋಟ, ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಘಟಕದ ಸಂಯೋಜಕಿ ಶಾರದಾ, ಕೃಷಿ ಇಲಾಖಾ ಅಧಿಕಾರಿ ಸಂಜನಾ, ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಸಂಯೋಜಕಿ ಅರ್ಪಿತಾ, ಸಮುದಾಯ ಆರೋಗ್ಯ ಅಧಿಕಾರಿ ಪರಸಪ್ಪ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಾಲೂಕು ಅಧಿಕಾರಿ (ಈ ನರೇಗಾ) ಅಕ್ಷಯ ಕೃಷ್ಣ ಪಿ. ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಜೀವಿನಿ ಒಕ್ಕೂಟದ ಎಂಬಿಕೆ ಅನಿತಾ ನಿರ್ವಹಿಸಿದರು. ಎಲ್‌ಸಿಆರ್‌ಪಿ ಆಶಾದೇವಿ ಸ್ವಾಗತಿಸಿದರು. ಒಕ್ಕೂಟದ ಮಾಲತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net