

ಉಡುಪಿ: ಸಂತೆಕಟ್ಟೆ ಸಮೀಪದ ಕಲ್ಯಾಣಪುರದಲ್ಲಿರುವ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಇತ್ತೀಚೆಗೆ ಪದ್ಮಶಾಲಿ ಯುವ ವೇದಿಕೆ ನೇತೃತ್ವದಲ್ಲಿ ದಿ.ಸಂಜೀವ ಶೆಟ್ಟಿಗಾರ ಕಿನ್ನಿಮುಲ್ಕಿ ಸ್ಮರಣಾರ್ಥ ಅವರ ಮಕ್ಕಳು ಉಡುಪಿ ಸುತ್ತಮುತ್ತಲಿರುವ ಪದ್ಮಶಾಲಿ ಸವಾಜದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ-ಪುಸ್ತಕ ವಿತರಿಸಿದರು.
ದೇವಸ್ಥಾನದ ಪ್ರಧಾನ ಮೊಕ್ತೇಸರ ಕೆ.ಜ್ಯೋತಿಪ್ರಸಾದ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ವಿತರಣಾ ಕಾರ್ಯಕ್ರಮದ ಆಯೋಜಕ ರಾಜನಾರಾಯಣ ಶೆಟ್ಟಿಗಾರ್, ಆಡಳಿತ ಮಂಡಳಿ ಉಪಾಧ್ಯಕ್ಷ ಬೂದ ಶೆಟ್ಟಿಗಾರ್, ಕಾರ್ಯದರ್ಶಿ ಕೆ.ಅಶೋಕ ಶೆಟ್ಟಿಗಾರ್ ಜತೆ ಕಾರ್ಯದರ್ಶಿ ವೆಂಕಟ ಶೆಟ್ಟಿಗಾರ್, ಭಜನಾ ಮಂಡಳಿ ಅಧ್ಯಕ್ಷ ದಯಾನಂದ ಶೆಟ್ಟಿಗಾರ್, ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜಿನಿ ವಿಠ್ಠಲ ಶೆಟ್ಟಿಗಾರ್ ಉಪಸ್ಥಿತರಿದ್ದರು.
ದೇವಸ್ಥಾನದ ಅರ್ಚಕ ರಾವೇಂದ್ರ ಭಟ್ಟ ಪ್ರಾರ್ಥಿಸಿದರು. ಯುವ ವೇದಿಕೆಯ ವಾಜಿ ಅಧ್ಯಕ್ಷ ಸಂತೋಷ ಸಗ್ರಿ ಸ್ವಾಗತಿಸಿದರು. ಯುವ ವೇದಿಕೆ ಅಧ್ಯಕ್ಷ ದಿನೇಶ ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ವಾತನಾಡಿದರು. ಕೋಶಾಧಿಕಾರಿ ಅವಿನಾಶ ಶೆಟ್ಟಿಗಾರ್ ವಂದಿಸಿದರು. 1ನೇ ತರಗತಿಯಿಂದ ಪಿಯುಸಿ ವರೆಗಿನ 55 ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕ ವಿತರಿಸಲಾಯಿತು.