ಮನುಷ್ಯನಿಗೆ ಆವರಿಸುತ್ತೆ ಮದ್ದಿಲ್ಲದ ಕಾಯಿಲೆ: ನಿಜವಾಯ್ತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

Kodi Mutt
Published on

ಮನುಷ್ಯನಿಗೆ ಮದ್ದಿಲ್ಲದ ಕಾಯಿಲೆಗಳು ಆವರಿಸಿಕೊಳ್ಳುತ್ತವೆ. ಔಷಧಗಳು ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುತ್ತವೆ. ಹೆಚ್ಚು ಪ್ರಕೃತಿ ದತ್ತವಾದ ರೋಗಗಳು ಆವರಿಸುತ್ತವೆ... ಇಂಥದ್ದೊಂದು ಭವಿಷ್ಯವಾಣಿಯನ್ನು ನುಡಿದಿದ್ದವರು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ.

ಭಾರತವನ್ನು ಕರೊನಾ ಸಂಕಷ್ಟ ಕಾಡುವ ಮುನ್ನ ಅಂದರೆ ಕಳೆದ ಫೆಬ್ರವರಿ 8ರಂದು ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯವನ್ನು ತಿಳಿಸಿದ್ದರು. ಈ ಮೂಲಕ ಶ್ರೀಗಳ ಭವಿಷ್ಯವಾಣಿ ಇನ್ನೊಮ್ಮೆನಿಜವಾಗಿದೆ.

ಶಾರ್ವರಿ ಸಂವತ್ಸರದಲ್ಲೂ ವಿಪರೀತ ಮಳೆಯಾಗುತ್ತದೆ‌. ಗಾಳಿ ಹಾಗೂ ಬೆಂಕಿ ಅವಘಡ ಸೇರಿ ಭೂಮಿ ತಲ್ಲಣಗೊಳ್ಳುತ್ತದೆ. ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತದೆ ಎಂದು ಶ್ರೀಗಳು ಭವಿಷ್ಯ ಹೇಳಿದ್ದರು.

ಪ್ರಕೃತಿಗೆ ಸವಾಲಾಗಿ, ಮನುಷ್ಯ ತನ್ನ ಬುದ್ಧಿ ಶಕ್ತಿಯಿಂದ ಹೊಸ ಆವಿಷ್ಕಾರ ಮಾಡುತ್ತ ಬರುತ್ತಿದ್ದಾನೆ. ರೆಕ್ಕೆ ಇಲ್ಲದ ಹಕ್ಕಿಗಳು ಹಾರಾಡಿವೆ. ಎತ್ತುಗಳು ಇಲ್ಲದ ಗಳೆಯನ್ನು ಹೊಡೆದಿದ್ದಾನೆ. ಎಣ್ಣೆ ಇಲ್ಲದ ದೀಪವನ್ನು ಉರಿಸಿದ್ದಾನೆ. ಅನೇಕ ವೈಜ್ಞಾನಿಕ ಆವಿಷ್ಕಾರ ಮಾಡಿ ಮನುಷ್ಯ ಜಗತ್ತನ್ನು ತಲ್ಲಣಗೊಳಿಸಿದ್ದಾನೆ.

ಮನುಷ್ಯ ಬಹಳ ಎತ್ತರಕ್ಕೆ ಜಗತ್ತಿನಲ್ಲಿ ಒಂದು ಶಕ್ತಿಯಾಗಿ ಬೆಳೆದಿದ್ದಾನೆ. ಇದರಲ್ಲಿ ಯಾವುದೋ ಒಂದು ಶಕ್ತಿ ಅಡಗಿದೆ. ಅದು ಇಡೀ ಜಗತ್ತನ್ನು ನಿಯಂತ್ರಣ ಮಾಡುತ್ತದೆ. ಅದನ್ನೇ ನಾವು ದೈವ ಶಕ್ತಿಯೆಂದು ಕರೆಯಬಹುದು. ಅಂತಹ ದೈವ ಶಕ್ತಿ ಮುನಿದರೆ ಮನುಷ್ಯನ ಯಾವ ಪ್ರಯತ್ನವು ವಿಫಲವಾಗುತ್ತವೆ‌ ಎಂದು ಸ್ವಾಮೀಜಿ ಹೇಳಿದ್ದರು.

ಪ್ರಕೃತಿಯ ಒಳಗುಟ್ಟನ್ನು ಭೇದಿಸುತ್ತ ಹೋದಂತೆ ಪ್ರಕೃತಿ ಮನುಷ್ಯನಿಗೆ ಸಹಕಾರಿಯಾಗುತ್ತೆ. ಹಾಗೇ ವಿಷಕಾರಿಯೂ ಆಗುತ್ತದೆ. ನೀರು, ಬೆಂಕಿ, ಗಾಳಿ, ಮನುಕುಲಕ್ಕೆ ವಿನಾಶಕಾರಿಯಾಗುತ್ತಿವೆ. ಜತೆ ಹೊಸ ರೋಗಗಳು ಉತ್ಪತ್ತಿಯಾಗುತ್ತವೆ. ಮನುಷ್ಯ ಹೆಚ್ಚು ಹಣ ಸಂಪಾದನೆ ಮಾಡಬೇಕೆಂದು ಪ್ರಕೃತಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಹೀಗಾಗಿ ಮನುಷ್ಯ ಎಲ್ಲಿ‌ ಎಡವಿದ್ದಾನೋ ಅಲ್ಲಿಯೇ ಸರಿ ಪಡಿಸಿಕೊಳ್ಳಬೇಕು. ಹೀಗಾಗಿ ಭಗವಂತನ ಮೊರೆ ಹೋಗುವುದು ಒಂದೇ ದಾರಿ ಎಂದು ಸಲಹೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net