ಕೊಡವ ಕೇರ್ ಬಲಿ ನಮ್ಮೆಗೆ ಚಾಲನೆ

ಕೊಡವ ಕೇರ್ ಬಲಿ ನಮ್ಮೆಗೆ ಚಾಲನೆ
Published on

ವಿರಾಜಪೇಟೆ: ಸಮೀಪದ ಎಸ್‌ಎಂಎಸ್ ವಿದ್ಯಾಪೀಠ ಅರಮೇರಿ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಬಾಳೆ ಕುಟ್ಟೀರ ಕೊಡವ ಕೇರ್ ಬಲಿ ನಮ್ಮೆ ಗುರುವಾರ ವಿಧ್ಯುಕ್ತವಾಗಿ ಚಾಲನೆಗೊಂಡಿತು.

ಬಾಳೆ ಕುಟ್ಟೀರ ಕುಟುಂಬ ಅಧ್ಯಕ್ಷ ಬಿ.ಎಂ.ಮಂದಣ್ಣರಿಂದ ಉದ್ಘಾಟನೆಗೊಂಡ ಮೆರವಣಿಗೆಯಲ್ಲಿ ಆಯೋಜಕರು ಹಾಗೂ ಸ್ಪರ್ಧಾ ತಂಡಗಳು ಮುಖ್ಯ ದ್ವಾರದಿಂದ ಮೈದಾನದವರೆಗೆ ಸಾಗಿ ಬಂದರು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿ, ಈ ರೀತಿಯ ಗ್ರಾಮೀಣ ಕ್ರೀಡಾಕೂಡಗಳು ಹೆಚ್ಚು ಹೆಚ್ಚು ನಡೆಯಬೇಕು. ಇದರಿಂದ ಸಮುದಾಯಗಳ ಒಗ್ಗೂಡುವಿಕೆಯೊಂದಿಗೆ ಪ್ರತಿಯೊಬ್ಬರಲ್ಲೂ ಸಾಮರಸ್ಯ, ಸಹಕಾರ ಬೆಳೆಯಲು ಸಾಧ್ಯ ಎಂದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ಕೊಡಗು ಜಿಲ್ಲೆ ಹಲವಾರು ವಿಶೇಷತೆಗಳಿಗೆ ಹೆಸರುವಾಸಿಯಾಗಿದ್ದು, ಅದರಲ್ಲಿ ಕ್ರೀಡೆಯೂ ಪ್ರಮುಖವಾಗಿದೆ. ಈ ಬೇಸಿಗೆ ಕಾಲವು ಕೊಡಗಿನಾದ್ಯಂತ ಕ್ರೀಡಾ ಪರ್ವವಾಗಿದ್ದು, ಇಂತಹ ಕ್ರೀಡಾಕೂಟಗಳು ನಾಡಿನ ಒಗ್ಗಟ್ಟಿಗೆ ಹಾಗೂ ಏಳಿಗೆಗೆ ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು. ಕ್ರೀಡೆಯೂ ದೈಹಿಕವಾಗಿ ಮಾತ್ರ ಅಲ್ಲ ಮಾನಸಿಕವಾಗಿಯೂ ಸದೃಢವಾಗಲು ಸಹಕಾರಿಯಾಗಿದೆ ಎಂದರು.

ರೈತ ಸಂಘದ ಅಧ್ಯಕ್ಷ ಕೆ.ಮನುಸೋಮಯ್ಯ, ಕೊಡವ ಸಮಾಜದ ಅಧ್ಯಕ್ಷ ಎ.ಮಹೇಶ್ ನಾಚಯ್ಯ ಕಿರಣ್ ಪೊನ್ನಪ್ಪ, ಕೆ.ಸೊಮಣ್ಣ, ಕಾಂತಂಡ ಬೀನ ಜಗದೀಶ್, ಬಿ.ಎಂ.ತಿಮ್ಮಯ್ಯ, ಬಿ.ಎ.ದಮಯಂತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net