

ಬಂಟ್ವಾಳ: ಸಾಹಿತ್ಯವು ಜೀವನದ ಸ್ವರೂಪವನ್ನು ಉತ್ತಮ ದಿಕ್ಕಿಗೆ ಪ್ರವಹಿಸುವಂತೆ ಮಾಡುತ್ತದೆ. ಸಮಯದ ಸದುಪಯೋಗ ಮತ್ತು ಮನೋಶಕ್ತಿ ಬಲಗೊಳ್ಳಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಬಂಟ್ವಾಳ ಮೂಡ ಸಿ.ಆರ್.ಪಿ. ಪ್ರೇಮಲತಾ ಅಭಿಪ್ರಾಯಪಟ್ಟರು.
ಕೊಡಂಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ಮೂಡ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಅನುದಾನಿತ ಮತ್ತು ಅನುದಾನಿತ ಹಿರಿಯಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಸಾಹಿತ್ಯ ಸ್ವರಚನೆ ಪ್ರೇರಣಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಂಗೆ ಎಸ್‌ಡಿಎಂಸಿ ನಿಕಟ ಪೂರ್ವ ಅಧ್ಯಕ್ಷ ಇಸ್ಮಾಯಿಲ್ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು
ಮಕ್ಕಳ ಸ್ವರಚಿತ ಸಾಹಿತ್ಯದ ಹಸ್ತಪತ್ರಿಕೆಯನ್ನು ಕೊಡಂಗೆ ಶಾಲಾ ಮುಖ್ಯಶಿಕ್ಷಕಿ ಸುಗುಣ ಬಿಡುಗಡೆ ಮಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಹುಸೈನ್ ಮತ್ತು ಮೊಹಮ್ಮದ್ ಹನೀಫ್ ಉಪಸ್ಥಿತರಿದ್ದರು. ಮಕ್ಕಳ ಕಲಾಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು ಪ್ರಸ್ತಾವನೆ ಮಾಡಿದರು. ಮುಖ್ಯಶಿಕ್ಷಕಿ ಸುಗುಣ ಸ್ವಾಗತಿಸಿ, ವಿಲ್ಮಾ ಸಿಕ್ವೇರ ವಂದಿಸಿ, ಮಕ್ಕಳ ಕಲಾಲೋಕದ ಕಾರ್ಯದರ್ಶಿ ಪುಷ್ಪಾ ಎಚ್ ಕಾರ್ಯಕ್ರಮ ನಿರೂಪಿಸಿದರು.