ಕೋಟಿ ಪಂಚಾಕ್ಷರಿ ಜಪ ಯಜ್ಞ ಪ್ರಾದೇಶಿಕ ಸಮಿತಿ ರಚನೆ

New Project (48)
Published on

ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯಲಿರುವ ಕೋಟಿ ಪಂಚಾಕ್ಷರಿ ಜಪ ಯಜ್ಞದ ಜೆ.ಪಿ.ಕಾಲೋನಿ ಪ್ರಾದೇಶಿಕ ಸಮಿತಿಯನ್ನು ಜೆ.ಪಿ. ಕಾಲೋನಿ ಕೊರಗಜ್ಜನ ಸನ್ನಿಧಿಯಲ್ಲಿ ರಚಿಸಲಾಯಿತು.

ಪ್ರಸಾದ್ ಶೆಟ್ಟಿ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಮನೋಜ್ ಆಯೆಯಾದರು. ವಾರ್ಡ್ ಸದಸ್ಯೆ ಶಾರದಾ ಅಧ್ಯಕ್ಷತೆ ವಹಿಸಿದ್ದರು. ಕೋಟಿ ಪಂಚಾಕ್ಷರಿ ಜಪ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷರು ಕೆ.ಎನ್. ವೆಂಕಟರಮಣ ಹೊಳ್ಳ ಹಾಗೂ ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್.ಕಾರ್ಯಕ್ರಮದ ಬಗ್ಗೆ ಮಾಹಿತಿ ನಿಡಿದರು. ಕ್ಷೇತ್ರದ ಮೊಕ್ತೇಸರ ಬಾಬು ಪೂಜಾರಿ, ಕೊರಗಜ್ಜ ಸೇವಾ ಟ್ರಸ್ಟಿನ ಅಧ್ಯಕ್ಷ ಮಾಧವ ಉಪಸ್ಥಿತರಿದ್ದರು. ಸಮಾರಂಭದ ವಿಜ್ಞಾಪನಾ ಪತ್ರಿಕೆ ಮತ್ತು ಕೂಪನ್ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ನಗರಸಭಾ ಮಾಜಿ ಸದಸ್ಯ ಶಂಕರ ಸ್ವಾಗತಿಸಿದರು. ಕೃಷ್ಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net